Sunday, September 7, 2025
HomeUncategorized120 ಕೋಟಿ ರೂ. ಮೌಲ್ಯದ 60 ಕೆ.ಜಿ. ಡ್ರಗ್ಸ್ ವಶ

120 ಕೋಟಿ ರೂ. ಮೌಲ್ಯದ 60 ಕೆ.ಜಿ. ಡ್ರಗ್ಸ್ ವಶ

ಮುಂಬೈ ಮತ್ತು ಗುಜರಾತ್‌ನ ವಿವಿಧೆಡೆ ದಾಳಿ ನಡೆಸಿರುವ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು 120 ಕೋಟಿ ರೂಪಾಯಿ ಮೌಲ್ಯದ ಮೆಫೆಡ್ರೋನ್‌ ಹೆಸರಿನ 60 ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಅಂತರರಾಜ್ಯ ಡ್ರಗ್ಸ್‌ ಪೂರೈಕೆ ಜಾಲಕ್ಕೆ ಸಂಬಂಧಿಸಿದಂತೆ ಏರ್‌ ಇಂಡಿಯಾದ ಮಾಜಿ ಪೈಲಟ್‌ ಒಳಗೊಂಡಂತೆ ಆರು ಜನರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನೌಕಾಪಡೆಯ ಗುಜರಾತ್‌ನ ಗುಪ್ತಚರ ವಿಭಾಗಕ್ಕೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಯಿತು ಎಂದು ಎನ್‌ಸಿಬಿಯ ಉಪ ಮಹಾನಿರ್ದೇಶಕ ಸಂಜಯ್‌ ಸಿಂಗ್ ತಿಳಿಸಿದ್ದಾರೆ.

ಇನ್ನು, ಈ ಜಾಲ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಎನ್‌ಸಿಬಿ ತಂಡ ಜಾಮ್‌ನಗರದಲ್ಲಿ ಒಬ್ಬನನ್ನು ಬಂಧಿಸಿ 10 ಕೆ.ಜಿ ಮೆಫೆಡ್ರೋನ್ ವಶಕ್ಕೆ ಪಡೆದಿದ್ದು, ಮುಂಬೈನಲ್ಲಿ ಮೂವರನ್ನು ಬಂಧಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments