Wednesday, August 27, 2025
Google search engine
HomeUncategorizedಜೋಗತಿ ಮಂಜಮ್ಮ ಸೇರಿದಂತೆ 2001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ.!

ಜೋಗತಿ ಮಂಜಮ್ಮ ಸೇರಿದಂತೆ 2001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ.!

ಗದಗ: ನವರಾತ್ರಿ ನಿಮಿತ್ತ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ 2001 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 2001 ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪದ್ಮಶ್ರೀ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಜೋಗತಿ ಮಂಜಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ನೂರಾರು ಮಹಿಳೆಯರಿಂದ ಕುಂಬಹೊತ್ತು ಮೆರವಣಿಗೆ, ದಾರಿಯುದ್ದಕ್ಕೂ ಮಜಲು, ಡೊಳ್ಳು ವಾದನಗಳ ಸಂಭ್ರಮ. ಎಲ್ಲೆಲ್ಲೂ ವಿದ್ಯುತ್ ಅಲಂಕಾರದ ಜಗಮಗವಾಗಿ ಕಂಗೊಳಿಸಿತು. ಕಳೆದ ಒಂಬತ್ತು ದಿನಗಳಿಂದ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು. ಮಂಜಮ್ಮ ಜೋಗತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುತೈದೆರೆಲ್ಲ ಸೇರಿ ಅವರಿಗೆ ಉಡಿ ತುಂಬಿದ್ರು. ತವರು ಮನೆ ಇಲ್ಲದ ಮುತೈದೆಯರಿಗೆ ಇಂತಹ ಕಾರ್ಯಕ್ರಮಗಳೇ ತವರು ಇದ್ದಂತೆ ಅಂತ ಜೋಗತಿ ಮಂಜಮ್ಮ ಸಂತಸ ವ್ಯಕ್ತಪಡಿಸಿದ್ರು.

ಆಧುನಿಕ ಯುಗದಲ್ಲಿ ಯುವಜನರು ಸಂಸ್ಕೃತಿ ಸಂಪ್ರದಾಯ ಆಚರಣೆ ಮರೆಯುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನತೆಯನ್ನು ಆಧ್ಯಾತ್ಮದೆಡೆ ಸೆಳೆಯಬೇಕು. ಅದಕ್ಕಾಗಿ ಯುವಕರ ಭಾಗವಹಿಸುವಿಕೆ ಕೆಲಸ ಮಾಡಲಾಗ್ತಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಗುರುನಾಥ ದಾನಪ್ಪನ್ನವರ ಹೇಳಿದರು.

ರಾಜ್ಯಾದ್ಯಂತ ದುರ್ಗಾದೌಡ ಕಾರ್ಯಕ್ರಮ ಯಶಸ್ವಿಯಾಗಿವೆ. ಗದಗ ಜಿಲ್ಲೆಯಲ್ಲೂ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಆಚರಣೆಗಳು ಹೀಗೆ ಸದಾ ಇರಲಿ. ಹೆಚ್ಚೆಚ್ಚು ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ಎಂಬುದೇ ನಮ್ಮ ಆಶಯ.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ

RELATED ARTICLES
- Advertisment -
Google search engine

Most Popular

Recent Comments