Friday, August 29, 2025
HomeUncategorizedಮಾರ್ಕೆಟ್ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ

ಮಾರ್ಕೆಟ್ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ

ಬೆಂಗಳೂರು : ಕೆ.ಆರ್.ಮಾರುಕಟ್ಟೆ ಸಾಕಷ್ಟು ವ್ಯಾಪರಸ್ಥರ ಹಾಟ್ ಆಫ್ ದಿ ಪ್ಲೇಸ್. ಎಷ್ಟೋ ಜನರ ಬದುಕಿಗೆ ದಾರಿ ಕಲ್ಪಿಸಿಕೊಟ್ಟಿರುವ ಏರಿಯಾ. ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳಿಗೆ ಕೆಲಸಕ್ಕೆ ಹೋಗುವ ನೌಕರರು ಇದೇ ಮಾರ್ಕೆಟ್ ಮಾರ್ಗವಾಗಿಯೇ ಹೋಗಬೇಕು. ಇನ್ನು ಮೈಸೂರ್ ರೋಡ್ ಸೇರಿದಂತೆ ಸಿಟಿಯ ಒಳಗೆ ಪ್ರವೇಶ ಕೊಡಬೇಕು ಅಂದ್ರೂ ಮಾರ್ಕೆಟ್ ಮಾರ್ಗವಾಗಿಯೇ ಬರಬೇಕು. ಹೀಗಾಗಿ ಪ್ರತಿದಿನ ಟ್ರಾಫಿಕ್ ಜಾಮ್‌ನಿಂದಾಗಿ ಜನರು ಪರದಾಡುತ್ತಾರೆ. ಸಾಲದಕ್ಕೆ ರಸ್ತೆಗಳನ್ನು ದಾಟಬೇಕು ಗಂಟೆಗಟ್ಟಲೇ ರಸ್ತೆಯಲ್ಲಿಯೇ ಕಾದು ನಿಲ್ತಾರೆ. ಇಂತಹ ಪರಿಸ್ಥಿತಿಯನ್ನು ಕಡಿಮೆ ಮಾಡಬೇಕು ಅಂತಾನೇ ಬಿಬಿಎಂಪಿ ಹಾಗೂ ಸ್ಮಾರ್ಟ್ ಸಿಟಿ ಸಂಸ್ಥೆ ಮೂರು ವರ್ಷಗಳ ಹಿಂದೆ ಸುರಂಗ ಮಾರ್ಗ ನಿರ್ಮಿಸುವುದಕ್ಕೆ ಆರಂಭ ಮಾಡಿದ್ರು. ಸದ್ಯ ಸುರಂಗ ಮಾರ್ಗದ ಕೆಲಸ ಮುಗಿದಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ.

ಹೌದು, ಕೆ.ಆರ್.ಮಾರ್ಕೆಟ್‌ನ ಸುರಂಗ ಮಾರ್ಗ ಐಶಾರಾಮಿಯ ವಾಸ್ತು ಶಿಲ್ಪ ಮಾದರಿಯಲ್ಲಿದ್ದು, ಆರು ಧ್ವಾರಗಳನ್ನು ನಿರ್ಮಿಸಲಾಗಿದೆ. ಪ್ರತಿ 20 ರಿಂದ 50 ಮೀಟರ್‌ಗೆ ಒಂದು ಸಿಸಿಟಿವಿ ಅಳವಡಿಸಿದ್ದು, ಬಸ್ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ದ್ವಾರದಲ್ಲಿ ಎಸ್ಕಲೇಟರ್ ನಿರ್ಮಾಣ‌ ಮಾಡಲಾಗಿದೆ.ಇನ್ನು ಸುರಂಗ ಮಾರ್ಗದ ಒಳಗೆ ವಿಶಾಲವಾಗಿದ್ದು, ವೃದ್ಧರು ಮತ್ತು ಅಂಗವಿಕಲರ ಸಂಚಾರಕ್ಕೆ ಇಳಿಜಾರು ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಎಲ್ಲಾ ಬಾಗಿಲುಗಳಿಗೆ ಕಾವಲುದಾರರನ್ನು ನೇಮಿಸಿದ್ದು, ಉತ್ತಮ ಬೆಳಕಿಗಾಗಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇನ್ನು ಮಹಿಳೆಯರಿಗೆ ಸುರಕ್ಷತೆ ಒದಗಿಸುವ ಸಲುವಾಗಿ ಎಲ್ಲಾ ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇನ್ನು ಈ ಸುರಂಗ ಮಾರ್ಗಕ್ಕೆ ಆರು ದ್ವಾರಗಳಿದ್ದು, ಕಲಾಸಿಪಾಳ್ಯ ರಸ್ತೆ, ಕೆ ಆರ್ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ ರಸ್ತೆ, ಎಸ್ ಜೆಪಿ ರಸ್ತೆಯ ಟರ್ಮಿನಲ್ , ಮಾರುಕಟ್ಟೆ ಪ್ರವೇಶ ಮತ್ತು ಅವೆನ್ಯೂ ರಸ್ತೆಯನ್ನು ಸಂಪರ್ಕಿಸಲಿದೆ. ಇನ್ನು ಈ ಸುರಂಗ ಮಾರ್ಗವನ್ನು ನಿರ್ಮಿಸಲು ಒಟ್ಟು 18.68 ಕೋಟಿಯಷ್ಟು ಹಣ ಖರ್ಚು ಮಾಡಿದ್ದು, ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಗೊಳ್ಳುತ್ತಿದೆ.

ಇನ್ನು, ಪ್ರತಿದಿನ ಟ್ರಾಫಿಕ್‌ನಿಂದಾಗಿ ಮಾರ್ಕೆಟ್‌ನಲ್ಲಿ ಓಡಾಡುವುದಕ್ಕೆ ಕಷ್ಟವಾಗುತ್ತಿತ್ತು. ಇದೀಗ ಸುರಂಗ ಮಾರ್ಗ ಮಾಡಿರುವುದು ತುಂಬಾ ಅನುಕೂಲವಾಗುತ್ತಿದೆ. ಇನ್ನು ಈಗಾಗಲೇ ಬೆಂಗಳೂರಿನಲ್ಲಿರುವ ಸುರಂಗ ಮಾರ್ಗಗಳಲ್ಲಿ ವ್ಯಾಪಾರಸ್ಥರ ಹಾವಳಿ ಜಾಸ್ತಿಯಾಗಿದೆ. ಹೀಗಾಗಿ ಈ ಸುರಂಗ ಮಾರ್ಗದಲ್ಲಾದ್ರೂ ಯಾವುದೇ ವ್ಯಾಪಾರಕ್ಕೆ ಅವಕಾಶ ಕೊಡುವುದು ಬೇಡ. ವ್ಯಾಪಾರಕ್ಕೆ ಅನುವು ಮಾಡಿಕೊಟ್ರೆ ಜನರಿಗಿಂತ ಹೆಚ್ಚಿನದಾಗಿ ವ್ಯಾಪಾರಸ್ಥರೇ ತುಂಬಿಕೊಳ್ತಾರೆ. ಸದ್ಯ ಹೇಗೆ ಸ್ವಚ್ಛವಾಗಿದೆಯೋ ಅದೇ ರೀತಿ ಸ್ವಚ್ಛತೆಯನ್ನು ಕಾಪಾಡಿಕೊಂಡ್ರೆ ಚೆನ್ನಾಗಿರುತ್ತೆ ಅಂತ ಪಾದಚಾರಿಗಳು ಸಂತಸ ವ್ಯಕ್ತಪಡಿಸ್ತಿದ್ದಾರೆ.

ಒಟ್ಟಿನಲ್ಲಿ, ಇದೇ ಮೊದಲ ಬಾರಿ ಐಶಾರಾಮಿಯ ಸುರಂಗ ಮಾರ್ಗವನ್ನು ಕೆ.ಆರ್.ಮಾರುಕಟ್ಟೆಯಲ್ಲಿ ನಿರ್ಮಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸುರಂಗ ಮಾರ್ಗ ಉಧ್ಘಾಟನೆಗೊಳ್ಳಲಿದೆ.ಜನರು ಉಪಯೋಗ ಪಡಿಸಿಕೊಳ್ಳಬಹುದಾಗಿದ್ದು, ಇನ್ಮುಂದೆಯಾದ್ರೆ ಕೆ.ಆರ್.ಮಾರುಕಟ್ಟೆಯಲ್ಲಿ ಟ್ರಾಫಿಕ್‌ಗೆ ಕಡಿವಾಣ ಬೀಳಲಿದ್ದು, ಕೆ‌.ಆರ್. ಮಾರ್ಕೆಟ್‌ನಲ್ಲಿ ಸಂಚರಿಸುವವರಿಗೆ ಸಂತಸ ತಂದಂತಾಗಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments