Tuesday, September 9, 2025
HomeUncategorizedದಿನದಿಂದ ದಿನಕ್ಕೆ ರಂಗೇರ್ತಿದೆ ಮೈಸೂರು ದಸರಾ ವೈಭವ

ದಿನದಿಂದ ದಿನಕ್ಕೆ ರಂಗೇರ್ತಿದೆ ಮೈಸೂರು ದಸರಾ ವೈಭವ

ಮೈಸೂರು :  ದಸರಾ ದರ್ಬಾರ್ ಜೋರಾಗಿದೆ.ರೈತ ದಸರಾ ಎಲ್ಲರ ಗಮನ ಸೆಳೆಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ರೈತ ದಸರಾ ಮೆರವಣಿಗೆ ಜೆ.ಕೆ.ಮೈದಾನದಲ್ಲಿ ಕೊನೆಗೊಂಡಿತು.ಇನ್ನು ಇತ್ತ ಮಹಿಳಾ ದಸರಾ 3 ದಿನಕ್ಕೆ ಕಾಲಿಟ್ಟಿದ್ದು, ಮಹಿಳೆಯರಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ರು. ಮೊದಲಿಗೆ ಅಂಗನವಾಡಿ ಕಾರ್ಯಕರ್ತೆಯರು ತುಂಬಿದ ಬಿಂದಿಗೆಯನ್ನು ಹಿಡಿದು ಓಡುವ ಸ್ಪರ್ಧೆಯನ್ನು ನಡೆಸಿದರು. ಇದರಲ್ಲಿ ಎಲ್ಲರೂ ಕೂಡ ತುಂಬಾ ಉತ್ಸಾಹದಿಂದ ಭಾಗಿಯಾದ್ರು. ಇನ್ನು ಮತ್ತೊಂದು ಕಡೆ ಬಲೂನ್ ಓದುವ ಸ್ಪರ್ಧೆ ಕೂಡ ಇತ್ತು ಬಲೂಲನ್ನ ಊದಿ ಊದಿ ಅಂಗನವಾಡಿ ಕಾರ್ಯಕರ್ತೆಯರು ಸುಸ್ತಾದ್ರು ಕೊನೆಗೂ ಕೂಡ ಒಂದು ನಿಮಿಷದಲ್ಲಿ 11 ಬಲೂನ್ ಓದಿ ಒಡೆಯುವ ಮೂಲಕ ಅಂಗನವಾಡಿ ಕಾರ್ಯಕರ್ತೆ ಯೊಬ್ಬರು ವಿನ್ ಆದ್ರು.

ಇನ್ನು ಯುವ ದಸರಾ 2ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಯುವ ದಸರಾವನ್ನು ಅಪ್ಪು ಸ್ಮರಣಾರ್ಥವಾಗಿ ನಡೆಸಲಾಯಿತು. ಗುರುವಾರ ಕೂಡ ಯುವ ದಸರಾದಲ್ಲಿ 10 ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿತ್ತು.

ಇನ್ನು ಮೈಸೂರಿನಲ್ಲಿ ಗ್ರಾಮೀಣ ದಸರಾವನ್ನು ಕೂಡ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲೂ ಕೂಡ ಆದಿವಾಸಿ ಸಮುದಾಯ ಸೇರಿ ಹಲವು ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಆಯಿತು.

ಇನ್ನು ಇತ್ತ ಜಂಬೂ ಸವಾರಿಗೇ ದಿನಗಣನೆ ಶುರುವಾಗಿರುವಂತಹ ಹಿನ್ನೆಲೆ ಆನೆಗಳಿಗೆ ತಾಲೀಮು ಶುರುವಾಗಿದೆ. ಪ್ರತಿದಿನ ಸಂಜೆ 5:30ಕ್ಕೆ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಮಾಡಲಾಗುತ್ತಿದೆ.

ಒಟ್ಟಾರೆ ಆಯುಧಪೂಜೆ ಹಾಗೂ ವಿಜಯದಶಮಿಗೆ ಇನ್ನೇನು ಕೌಂಟ್ ಡೌನ್ ಶುರುವಾಗಿರುವಂತಹ ಹಿನ್ನೆಲೆಯಲ್ಲಿ ದಿನೇ ದಿನೇ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮೈಸೂರಿನಲ್ಲಿ ದಸರಾ ಹಬ್ಬದ ವೈಭವ ಕಳೆಗಟ್ಟಿಗೆ.

ಸ್ವಾತಿ ಫುಲಗಂಟಿ ಹಾಗೂ ಸುರೇಶ್ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments