Tuesday, September 9, 2025
HomeUncategorizedರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ, ಫ್ಲೆಕ್ಸ್ ಹರಿದ ದುಷ್ಕರ್ಮಿಗಳು

ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ, ಫ್ಲೆಕ್ಸ್ ಹರಿದ ದುಷ್ಕರ್ಮಿಗಳು

ಚಾಮರಾಜನಗರ : ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಚಾಮರಾಜನಗರ ಜಿಲ್ಲೆಗೆ ಪಾದಯಾತ್ರೆ ಮೂಲಕ ಬರುತ್ತಿರುವ ಹಿನ್ನಲೆಯಲ್ಲಿ ಗುಂಡ್ಲುಪೇಟೆಯಲ್ಲಿ ರಾಹುಲ್, ಸಿದ್ದು, ಡಿಕೆ, ಫ್ಲೆಕ್ಸ್​ಗಳನ್ನು, ದುಷ್ಕರ್ಮಿಗಳು ಹರಿದು ಹಾಕಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿರುವ ಭಾರತ್ ಜೋಡೋ‌ ಯಾತ್ರೆ. ಸೆ.30ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಪಕ್ಷದ ವತಿಯಿಂದ ಅಳವಡಿಸಿದ್ದ ನಾಯಕರ ಫ್ಲೆಕ್ಸ್​ಗಳು. ಗುರುವಾರ ಬೆಳಗ್ಗಿನ ಜಾವ ದುಷ್ಕರ್ಮಿಗಳು ಹರಿದು ಹಾಕಿದ್ದಾರೆ.

ಇನ್ನು, ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಭಿ‌ ಹೋಟೇಲ್‌ನಿಂದ ಊಟಿ ರಸ್ತೆಯ ಉದ್ದಕ್ಕೂ ಅಳವಡಿಸಿದ್ದ ಫ್ಲೆಕ್ಸ್​ಗಳನ್ನು, ಕಿಡಿಗೇಡಿಗಳು ಹರಿದುಹಾಕಿದ್ದಾರೆ. ಗುಂಡ್ಲುಪೇಟೆ ಕಾಂಗ್ರೆಸ್ ‌ಮುಖಂಡ ಗಣೇಶ್ ಪ್ರಸಾದ್ ಫ್ಲೆಕ್ಸ್ ಹರಿದು ಹಾಕಿರುವವರು ಬಿಜೆಪಿಯವರು ಎಂದು ಆರೋಪ ಮಾಡಿದ್ದು, ಇದಕ್ಕೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರ ಶಿಷ್ಯ ಪ್ರಣಯ್ ಕುಮ್ಮಕ್ಕು ನೀಡಿದ್ದಾರೆ ಎಂದು ಗಣೇಶ ಪ್ರಸಾದ್ ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments