Sunday, September 7, 2025
HomeUncategorizedಕಾಗವಾಡ‌ ಮತಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿದ ಬಿಜೆಪಿ

ಕಾಗವಾಡ‌ ಮತಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿದ ಬಿಜೆಪಿ

ಬೆಳಗಾವಿ : ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಅಖಾಡಕ್ಕೆ ತಯಾರಿ ಮಾಡಿಕೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಗವಾಡ ತಾಲೂಕಿನ ಮದಭಾವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೀತು. ಕಾರ್ಯಕ್ರಮದಲ್ಲಿ ಕಟೀಲ್ ಜೊತೆ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಮಹೇಶ್ ಕುಮಟಳ್ಳಿ, ಪಿ ರಾಜೀವ್, ಶ್ರೀಮಂತ ಪಾಟೀಲ್ ಉಪಸ್ಥಿತಿ ಇದ್ದರು. ಪ್ರಮುಖವಾಗಿ ಶ್ರೀಮಂತ ಪಾಟೀಲ್ ಅವರ ಪರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು, 2023ರ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ‌ ಇದ್ದು, ಶ್ರೀಮಂತ ಪಾಟೀಲ್ ಪರ ಬಿರುಸಿನ ಪ್ರಚಾರದೊಂದಿಗೆ ರಾಜ್ಯದ ಪ್ರವಾಸ ಶುರು ಹಚ್ಚಿಕೊಂಡರು. ಕ್ಷೇತ್ರದಲ್ಲಿ‌ ಇತ್ತೀಚಿಗೆ ಶ್ರೀಮಂತ ಪಾಟೀಲ್ ವಿರುದ್ಧ ಹಲವಾರು ಅಭಿವೃದ್ಧಿ ಕುಂಠಿತವಾಗುತ್ತದೆ ಅಂತ ಆರೋಪಗಳಿವೆ. ಆದರೆ ಬಿಜೆಪಿ ಸಭೆಯಲ್ಲಿ ತಾವು ಮಾಡಿದ ಎಲ್ಲ ಕಾರ್ಯಗಳನ್ನು ಪಕ್ಷದ ಅಧ್ಯಕ್ಷರ ಮುಂದೆ ಹೇಳಿದ ಶ್ರೀಮಂತ ಪಾಟೀಲ್‌ ಮುಂದೆ ಕೂಡ ಅಭಿವೃದ್ಧಿ ಪಥದಲ್ಲಿ ಸಾಗುತ್ತೇನೆ ಎಂದು ಆಶ್ವಾಸನೆ ನೀಡಿದರು.

ಲಕ್ಷ್ಮಣ ಸವದಿ ಮಾತನಾಡಿ ನನ್ನ ಸ್ವಂತ ಮಗ ಕಾಂಗ್ರೆಸ್ ನಿಂದ ಕಾಗವಾಡ ಮತಕ್ಷೇತ್ರದಲ್ಲಿ ನಿಂತರೂ ನಾನು ಶ್ರೀಮಂತ ಪಾಟೀಲ್ ಅವರಿಗೆ ಬಹಿರಂಗ ಬೆಂಬಲ‌ ನೀಡಿ ಚುನಾವಣೆಯಲ್ಲಿ‌ ಗೆಲ್ಲಿಸಿ ಕೊಡುವೆವು ಅಂತಾ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments