Thursday, August 28, 2025
HomeUncategorizedPFI ಬ್ಯಾನ್​, ಹಿಂದೂಗಳ ಹತ್ಯೆಗೆ ಈಗ ಶಾಂತಿ ಸಿಗಲಿದೆ; ಶೋಭಾ ಕರಾಂದ್ಜಾಜೆ

PFI ಬ್ಯಾನ್​, ಹಿಂದೂಗಳ ಹತ್ಯೆಗೆ ಈಗ ಶಾಂತಿ ಸಿಗಲಿದೆ; ಶೋಭಾ ಕರಾಂದ್ಜಾಜೆ

ನವದೆಹಲಿ: ಪಿಎಫ್ಐ ಸಂಘಟನೆ ಹಲವರು ಹಿಂದೂ ಕಾರ್ಯಕರ್ತರನ್ನ ಹಾಗೂ ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡಿತ್ತು. ಈಗ ಪಿಎಫ್​ಐ ಸಂಘಟನೆಯನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದನ್ನ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಅವರು ಸ್ವಾಗತಿಸಿದರು.​

ಪಿಎಫ್​ಐ ಬ್ಯಾನ್​ ಕುರಿತು ನವದೆಹಲಿಯಲ್ಲಿಂದು ಮಾತನಾಡಿದ ಅವರು, ದೇಶ ದ್ರೋಹಿ ಚಟುವಟಿಕೆ, ಹಣ ಸಂಗ್ರಹಣೆ, ಹಿಂದೂ ಯುವಕರ ಹತ್ಯೆಯಲ್ಲಿ ಪಿಎಫ್ಐ ಭಾಗಿಯಾಗಿತ್ತು. ಇಂತಹ ಕುಕೃತ್ಯವೆಸಗುವ ಸಂಘಟನೆ ಬಗ್ಗೆ ಈ ಹಿಂದೆ ಗೃಹ ಸಚಿವರನ್ನ ಭೇಟಿಯಾಗಿ ಬ್ಯಾನ್ ಮಾಡುವಂತೆ ಮನವಿ ಸಲ್ಲಿಸಿದ್ದೇವು. ಈಗ ಕಾರ್ಯರೂಪಕ್ಕೆ ಬಂದಿದೆ ಎಂದರು.

ಕರ್ನಾಟಕದಲ್ಲಿ ಕೆಎಫ್​ಡಿ ಅಡಿಯಲ್ಲಿ ಪಿಎಫ್​ಐ ಚಟುವಟಿಕೆ ನಡೆಸುತ್ತಿತ್ತು. ಕೇಂದ್ರ ಸರ್ಕಾರಕ್ಕೆ ದೇಶಕ್ಕೆ ಅಭದ್ರತೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಲಷ್ಕರಿ ತೋಯ್ಬಾ ಸಂಘಟನೆ ಜೊತೆ ಪಿಎಫ್ಐ ಗುರುತಿಸಿಕೊಂಡಿದೆ. ದೇಶ ದ್ರೋಹ, ಜಾತಿ ದ್ರೋಹ, ಉಂಟುಮಾಡುವ ಸಂಘಟನೆಗೆ ಯಾವತ್ತು ಉಳಿಗಾಲವಿಲ್ಲ. ಮನವಿ ಸಲ್ಲಿಸದ ಪೂರಕವಾಗಿ ದಾಖಲೆ ಕಲೆ ಹಾಕಿದ ಬಳಿಕ ಪಿಎಫ್ಐ ಸಂಘಟನೆ ನಿಷೇಧ ಮಾಡಲಾಗಿದೆ.

ದೇಶದಲ್ಲಿ ಎನ್ಐಎ ದಾಳಿ ಬಳಿಕ ಭಯೋತ್ಪಾದಕ ಸಂಘಟನೆ ಸಂಪರ್ಕಗಳ ಮಾಹಿತಿ ಸಿಕ್ಕಿದೆ. ಬಾಂಬ್ ತಯಾರಿಕೆ ಬಗ್ಗೆ ತರಬೇತಿ ನೀಡಲಾಗ್ತಿತ್ತು. ಎರಡು ಕಡೆ ಬಾಂಬ್ ಸ್ಪೋಟದ ಟ್ರಯಲ್ ಮಾಡಲಾಗಿದೆ. ಭಾರತದ ಧ್ವಜ ಸುಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಪ್ರವೀಣ್ ನೆಟ್ಟಾರು, ಶರತ್ ಮಡಿವಾಳ, ರುದ್ರೇಶ್ ಆತ್ಮಕ್ಕೆ ಶಾಂತಿ ಸಿಗಲಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments