Tuesday, August 26, 2025
Google search engine
HomeUncategorizedರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶ ಇಲ್ಲ : ಕೆ.ಎಸ್. ಈಶ್ವರಪ್ಪ

ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶ ಇಲ್ಲ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಭಗತಸಿಂಗ್ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಇಂದು PFI ನಿಷೇಧವಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, PFI ದೇಶದ್ರೋಹಿ ಚಟುವಟಿಕೆ ನಡೆಸುತ್ತಿತ್ತು. ವಿದೇಶದಿಂದ ಫಂಡಿಂಗ್ ಆಗ್ತಿತ್ತು. ಹಿಂದೂ ಯುವಕರ ಕೊಲೆ ಆಗ್ತಿತ್ತು. ಎಲ್ಲಾ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ. ನಗುನಗುತ್ತಾ ಪಾಕಿಸ್ತಾನ ತಗೊಂಡಿದ್ದೇವೆ, ಹೋರಾಟ ಮಾಡಿ ಭಾರತ ಪಡೆಯುತ್ತೇವೆ ಎಂಬ ಘೋಷಣೆ ಅವರದ್ದು. ಸರಿಯಾದ ಬಿಸಿಯನ್ನು ಕ್ರಾಂತಿಕಾರಿ ನಾಯಕ ಅಮಿತ್ ಶಾ ಕೊಟ್ಟಿದ್ದಾರೆ ಎಂದರು.

ಇನ್ನು, ರಾಷ್ಟ್ರದ್ರೋಹವನ್ನು ಅಮಿತ್ ಶಾ ಸಹಿಸಲ್ಲ. ಇಲ್ಲಿ ರಾಜಕೀಯ ಬರಬಾರದು. ಪಿಎಫ್ ಐ ಬ್ಯಾನ್ ಮಾಡಿಸಲು ಸಿದ್ದರಾಮಯ್ಯ ಒತ್ತಾಯ ಮಾಡಿದ್ರು. ನಿಮ್ಮದೇ ಸರ್ಕಾರ ಕೇಂದ್ರದಲ್ಲಿದೆ ಬ್ಯಾನ್ ಮಾಡಿ ಅಂತ ಅಧಿವೇಶನದಲ್ಲಿ ಹೇಳಿದ್ರು. ರಾಜ್ಯದಲ್ಲಿ ದಾಖಲೆ ಸಂಗ್ರಹ ಮಾಡಿ ದಾಖಲೆ ಸಮೇತ ಮನವಿ ಮಾಡಿದ್ವಿ. ಎಲ್ಲಾ ರಾಜ್ಯಗಳಿಂದ ಸಾಕ್ಷ್ಯ ಸಂಗ್ರಹಿಸಿ ಬ್ಯಾನ್ ಮಾಡಿದ್ದಾರೆ. ಹರ್ಷ ಕೊಲೆ, ಪ್ರೇಮಸಿಂಗ್ ಚೂರಿ ಇರಿತ ಪ್ರಕರಣ ಶಿವಮೊಗ್ಗದಲ್ಲಿ ನಡೆದಿತ್ತು. ಪ್ರಕರಣದ ತನಿಖೆಯಲ್ಲಿ ರಾಷ್ಟ್ರದ್ರೋಹಿಗಳ ಸಂಪರ್ಕಿರುವುದು ಪತ್ತೆಯಾಗಿತ್ತು ಎಂದು ಹೇಳಿದರು.

ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶ ಇಲ್ಲ. ರಾಷ್ಟ್ರಭಕ್ತಿಗೆ ಪ್ರೇರಣೆ ನೀಡಬೇಕು. ಶಾಂತಿ ಸಿಗಬೇಕು, ಈಗಲೂ ಕೆಲವರಲ್ಲಿ ಮನಸ್ಥಿತಿ ಇದೆ. ಮುಸಲ್ಮಾನರು ಶಾಂತಿ ಬಯಸುತ್ತಾರೆ. ಆದರೆ ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅವರ ಮನಸ್ಥಿತಿ ಬದಲಾಗದಿದ್ದರೆ ಅಶಾಂತಿ ಮುಂದುವರಿಯುತ್ತೆ. ಸಿದ್ದರಾಮಯ್ಯ ಕಾಲದಲ್ಲಿ 22 ಹಿಂದುಗಳ ಕಗ್ಗೊಲೆಯಾಗಿತ್ತು. ಮುಸಲ್ಮಾನರನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಂಡು ಬಂದರು. ಅದಕ್ಕೆ ಮೋದಿ ಸರ್ಕಾರ ತಡೆಯೊಡ್ಡಿದೆ ಎಂದರು

ನಲಪಾಡ್ ಹೇಳಿಕೆ ಉಗ್ರವಾಗಿ ಖಂಡಿಸ್ತೇನೆ. ಉಗ್ರವಾದಕ್ಕೆ ನಿರುದ್ಯೋಗ ಸಮಸ್ಯೆ ಕಾರಣ ಅಂತಾರೆ. ಅವನಿಗೆ ಎಚ್ಚರಿಕೆ ನೀಡ್ತೇನೆ. ಮೈಮೇಲೆ ಜ್ಞಾನ ಇಟ್ಟು ಮಾತನಾಡಲಿ. ಬೇರೆ ಬೇರೆ ಹೆಸರು ಇಟ್ಟುಕೊಂಡು ಮತ್ತೆ ಉಗ್ರ ಚಟುವಟಿಕೆ ನಡೆಸುವ ಸಾಧ್ಯತೆ ಇದೆ. ಆದರೆ ನಮ್ಮ ಸಿಂಹ ಅಮಿತ್ ಶಾ ಇದ್ದಾರೆ. ಅವರು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments