Saturday, August 23, 2025
Google search engine
HomeUncategorizedPFI, SDPI ಬೆಳೆಯಲು ಸಿದ್ದರಾಮಯ್ಯನೇ ಕಾರಣ : ನಳಿನ್​ ಕುಮಾರ್ ಕಟೀಲ್

PFI, SDPI ಬೆಳೆಯಲು ಸಿದ್ದರಾಮಯ್ಯನೇ ಕಾರಣ : ನಳಿನ್​ ಕುಮಾರ್ ಕಟೀಲ್

ವಿಜಯಪುರ : PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ ಹಾಗೂ ಅವರಿಂದಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿಜಯಪುರದಲ್ಲಿ BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲೇ ದೇಶ ವಿರೋಧಿ ಸಂಘಟನೆ ಬೆಳೆದಿವೆ. ನಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ದೇಶಾದ್ಯಂತ NIA ದಾಳಿ ನಡೆಸಿದೆ. ರಾಜ್ಯದಲ್ಲೇ ಅತೀ ಹೆಚ್ಚು PFI ಕಾರ್ಯಕರ್ತರ ಬಂಧನವಾಗಿದೆ ಎಂದರು.

PFI ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಅದಕ್ಕೆ ಸಾಕ್ಷ್ಯಾಧಾರಗಳ ಸಂಗ್ರಹ ನಡೆಯುತ್ತಿದೆ. ಕಟ್ಟುನಿಟ್ಟಿನ ಕ್ರಮದ ಜೊತೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ. PFI ಮೇಲೆ‌ ದಾಳಿ, ರಾಜಕೀಯ ಪ್ರೇರಿತ ಎಂದು ಕೆಲವರು ಆರೋಪ ಮಾಡ್ತಿದ್ದಾರೆ. ಆದ್ರೆ ಆರೋಪ ವಿಚಾರಕ್ಕೆ ಸಂಬಂದಪಟ್ಟಂತೆ ಎಲ್ಲದಕ್ಕೂ ರಾಜಕೀಯ ಪ್ರೇರಿತ ಎನ್ನುತ್ತಾರೆ. ಭಯೋತ್ಪಾದನೆಗೆ ರಾಜಕೀಯ ಪ್ರೇರಣೆ ನೀಡಿದವರು ಯಾರು ಎಂದು ಕಟೀಲ್ ಪ್ರಶ್ನೆ ಮಾಡಿದ್ರು.

RELATED ARTICLES
- Advertisment -
Google search engine

Most Popular

Recent Comments