Wednesday, August 27, 2025
Google search engine
HomeUncategorizedಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣ ಆರಂಭ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣ ಆರಂಭ

ರಾಮನಗರ : ಪ್ರಯಾಣಿಕರು, ವಾಹನ ಸವಾರರಿಗೆ ಅನುಕೂಲವಾಗಬೇಕು, ಟ್ರಾಫಿಕ್ ಕಿರಿಕಿರಿ ಇರಬಾರದು, ನಾನಾ ಕಾರಣಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ ಮಾಡುತ್ತಿವೆ. ಅಲ್ಲದೆ, ಹೆದ್ದಾರಿಯಲ್ಲಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೈಪಾಸ್ ರಸ್ತೆಗಳನ್ನು ಸಹಾ ನಿರ್ಮಾಣ ಮಾಡಿದೆ. ಆದರೆ, ಇದೇ ಬೈಪಾಸ್ ರಸ್ತೆ ವ್ಯಾಪಾರಸ್ಥರನ್ನು ಬೀದಿಗೆ ಬೀಳುವಂತೆ ಮಾಡಿದೆ. ಅಂದ ಹಾಗೆ ಈಗಾಗಲೇ ಬೆಂಗಳೂರಿನ ಕೆಂಗೇರಿಯಿಂದ ಮಂಡ್ಯದ ಮದ್ದೂರುವರೆಗೂ ಕಾಮಗಾರಿ ಮುಗಿದಿದೆ. ಹೀಗಾಗಿ ನೂತನ ದಶಪಥ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಇನ್ನು ಹೆದ್ದಾರಿಯಲ್ಲಿ ಸಿಗುವ ನಗರದ ಬದಲಿ ಬೈಪಾಸ್ ರಸ್ತೆಗಳಲ್ಲಿ ಶೇ.95ರಷ್ಟು ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ಈ ಹಿಂದೆ ಈ ಹೆದ್ದಾರಿ ಅಕ್ಕಪಕ್ಕದಲ್ಲಿ ಇದ್ದ ವ್ಯಾಪಾರಿಗಳಿಗೆ ಇದೀಗ ವ್ಯಾಪಾರವೇ ಇಲ್ಲದಂತೆ ಆಗಿದೆ. ಯಾವೊಬ್ಬ ಪ್ರಯಾಣಿಕರು, ಪ್ರವಾಸಿಗರು, ವಾಹನ ಸವಾರರು ಬರುತ್ತಿಲ್ಲ. ಎಲ್ಲಾ ವಾಹನಗಳು ಬೈಪಾಸ್ ರಸ್ತೆಯಲ್ಲಿಯೇ ಹೋಗುತ್ತಿವೆ. ಹೀಗಾಗಿ ಟೀ ಅಂಗಡಿಯಿಂದ ಹಿಡಿದು, ಹೋಟೆಲ್, ಪೆಟ್ರೋಲ್ ಬಂಕ್, ಪಂಚರ್ ಶಾಪ್ ಸೇರಿ ಬಹುತೇಕರಿಗೆ ವ್ಯಾಪಾರವೇ ಇಲ್ಲದಂತಾಗಿದೆ.

ನೂತನ ದಶಪಥ ರಸ್ತೆ ನಿರ್ಮಾಣಕ್ಕೂ ಮೊದಲು, ನಾಲ್ಕು ಪಥದ ರಸ್ತೆಯಲ್ಲಿಯೇ ಬೆಂಗಳೂರಿನಿಂದ ಹೊರಟು, ಕುಂಬಳಗೂಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿಗೆ ಪ್ರಯಾಣಿಕರು ಹೋಗುತ್ತಿದ್ದರು. ಪ್ರತಿನಿತ್ಯ ಲಕ್ಷಾಂತರ ವಾಹನಗಳ ಸಂಚಾರವಿತ್ತು. ನಗರ ಪ್ರದೇಶದ ಮೂಲಕವೇ ವಾಹನಗಳ ಸಂಚಾರವಿತ್ತು. ಈ ವೇಳೆ ಹೆದ್ದಾರಿಯ ಅಕ್ಕಪಕ್ಕದಲ್ಲಿ ಇದ್ದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಅದರಲ್ಲೂ ಪ್ರಮುಖವಾಗಿ ಬಿಡದಿಯಲ್ಲಿ ತಟ್ಟೆ ಇಡ್ಲಿ ಸವಿದು ಮೈಸೂರು ಕಡೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಇದೀಗ ತಟ್ಲೆ ಇಡ್ಲಿ ಸವಿಯುವುದಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ
ಕಡಿಮೆ ಆಗಿದೆ. ಶೇ.90ರಷ್ಟು ಮಂದಿ ಹೋಟೆಲ್ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಪ್ರವಾಸಿಗರನ್ನೇ ನಂಬಿಕೊಂಡು ಹೋಟೆಲ್ ನಡೆಸುತ್ತಿದ್ದವರ ಹೋಟೆಲ್‌ಗಳು ಖಾಲಿ ಹೊಡೆಯುತ್ತಿವೆ.

ಪ್ರವೀಣ್ ಎಂ.ಹೆಚ್.ಪವರ್ ಟಿವಿ ರಾಮನಗರ

RELATED ARTICLES
- Advertisment -
Google search engine

Most Popular

Recent Comments