Sunday, August 24, 2025
Google search engine
HomeUncategorizedದಸರಾ​ ದಂಗಲ್​ನಲ್ಲಿ ಬಿಗ್ ಸ್ಟಾರ್ಸ್​ ಬಿಗ್ ಮೂವೀಸ್..!

ದಸರಾ​ ದಂಗಲ್​ನಲ್ಲಿ ಬಿಗ್ ಸ್ಟಾರ್ಸ್​ ಬಿಗ್ ಮೂವೀಸ್..!

ಈ ಬಾರಿಯ ದಸರಾ ಬಹಳ ಅದ್ಧೂರಿ ಹಾಗೂ ಆಡಂಬರದಿಂದ ಕೂಡಿರಲಿದೆ. ಎರಡು ವರ್ಷದಿಂದ ಕೊರೋನಾ ಕಾರ್ಮೋಡದಲ್ಲಿ ಕರಗಿ ಹೋಗಿದ್ದ ಬಿಗ್ ಸೆಲೆಬ್ರೇಷನ್, ಇದೀಗ ಮತ್ತೆ ಮರುಕಳಿಸಲಿದೆ. ಅದ್ರಲ್ಲೂ ದಸರಾ ಸಂಭ್ರಮವನ್ನು ದುಪ್ಪಟ್ಟು ಮಾಡೋಕೆ ಸಾಲು ಸಾಲು ಸೂಪರ್ ಸ್ಟಾರ್ ಸಿನಿಮಾಗಳು ಬರ್ತಿವೆ. ಇಷ್ಟಕ್ಕೂ ಬಾಕ್ಸ್ ಆಫೀಸ್ ದಂಗಲ್​ಗೆ ಸಜ್ಜಾಗಿರೋ ಈ ಬಿಗ್ ಸ್ಟಾರ್ಸ್​ ಬಿಗ್ ಮೂವೀಸ್ ಯಾವ್ಯಾವು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್​ ನಿಮಗಾಗಿ.

  • ಹಬ್ಬದ ಸಂಭ್ರಮ ಹೆಚ್ಚಿಸಲಿವೆ 7 ಭಾರೀ ಬಜೆಟ್ ಪ್ರಾಜೆಕ್ಟ್ಸ್
  • ತೋತಾಪುರಿ v/s ಕಾಂತಾರ.. ಧನುಷ್ v/s ಮಣಿರತ್ನಂ
  • ಗಾಡ್​ಫಾದರ್ ಚಿರು ಜೊತೆ ಘೋಸ್ಟ್ ನಾಗಾರ್ಜುನ್ ಫೈಟ್

ಸಿನಿಮಾ ಅಂದ್ರೇನೇ ಹಬ್ಬ. ಇನ್ನು ಹಬ್ಬಕ್ಕೇನೇ ಸಿನಿಮಾ ಬಂದ್ರೆ ಸಿನಿರಸಿಕರ ಸಂಭ್ರಮ ಮುಗಿಲು ಮುಟ್ಟೋದ್ರಲ್ಲಿ ಡೌಟೇ ಇಲ್ಲ. ಯೆಸ್.. ಸದ್ಯ ಈ ಬಾರಿಯ ದಸರಾಗೆ ಯಾವುದೇ ಕೊರೋನಾ ಕಾಟ ಇಲ್ಲ. ಸಿನಿಮಾ ನೋಡೋ ಪ್ರೇಕ್ಷಕರಿಗೆ ಕೊವಿಡ್ ನಿಯಮಗಳಿಲ್ಲ. ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಅನ್ನೋ ನಿಬಂಧನೆಗಳಿಲ್ಲ. ಹಾಗಾಗಿ ಸೆಲೆಬ್ರೇಷನ್ ಡಬಲ್ ಆಗಲಿದೆ.

ದಸರಾ ಇದೇ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದ್ದು, ನವರಾತ್ರಿ ವಿಶೇಷ ಸಾಲು ಸಾಲು ಸಿನಿಮಾಗಳು ಪ್ರತಿ ಭಾಷೆಯಲ್ಲೂ ರಿಲೀಸ್ ಆಗ್ತಿವೆ. ಅದ್ರಲ್ಲೂ ಬಿಗ್ ಸ್ಟಾರ್ಸ್​ ಬಿಗ್ ಮೂವೀಸ್ ತೆರೆಗಪ್ಪಳಿಸುತ್ತಿರೋದು ವಿಶೇಷ. ಸದ್ಯ ಕನ್ನಡದಿಂದ ಕೆಜಿಎಫ್ ನಿರ್ಮಾಪಕರ ಕಾಂತಾರ ಹಾಗೂ ಜಗ್ಗೇಶ್​ರ ತೋತಾಪುರಿ ಚಿತ್ರಗಳು ಇದೇ ಸೆಪ್ಟೆಂಬರ್ 30ಕ್ಕೆ ಒಟ್ಟೊಟ್ಟಿಗೆ ಬಾಕ್ಸ್ ಆಫೀಸ್ ಕಾಳಗಕ್ಕೆ ಇಳಿಯುತ್ತಿವೆ.

ಎರಡೂ ಬೇರೆ ಬೇರೆ ಜಾನರ್ ಚಿತ್ರಗಳಾದರೂ ಸಹ ಬಾಕ್ಸ್ ಆಫೀಸ್​ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಇನ್ನು ಪಕ್ಕದ ತಮಿಳು ಚಿತ್ರರಂಗದ ಪ್ಯಾನ್ ಇಂಡಿಯಾ ಸಿನಿಮಾ ಪೊನ್ನಿಯಿನ್ ಸೆಲ್ವನ್ ಜೊತೆ ಧನುಷ್​ರ ನಾನೇ ವರುವೇನ್ ತೆರೆಗೆ ಬರ್ತಿದೆ. ಮಣಿರತ್ನಂರ ಪೊನ್ನಿಯಿನ್ ಸೆಲ್ವನ್ ಚಿತ್ರ ಬಹುತಾರಾಗಣದ ಪಂಚಭಾಷಾ ಚಿತ್ರವಾಗಿದ್ದು, ಚೋಳ ಸಾಮ್ರಾಜ್ಯದ ಗತವೈಭವ ತೋರಲಿದೆ. ಇದರ ಎದುರು ಧನುಷ್ ಏಕಾಂಗಿ ಹೋರಾಟ ನಡೆಸೋಕೆ ಸನ್ನದ್ಧರಾಗಿದ್ದಾರೆ ಇದೇ ಸೆಪ್ಟೆಂಬರ್ 30ಕ್ಕೆ ಅನ್ನೋದು ಕುತೂಹಲ ಕೆರಳಿಸಿದೆ.

ಪಕ್ಕದ ಟಾಲಿವುಡ್​ನಲ್ಲೂ ಅಕ್ಟೋಬರ್ 5ಕ್ಕೆ ಇಬ್ಬರು ಸೂಪರ್ ಸ್ಟಾರ್​ಗಳ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಒಂದ್ಕಡೆ ಮೆಗಾಸ್ಟಾರ್ ಚಿರಂಜೀವಿ ಅವ್ರ ಗಾಡ್​ಫಾದರ್, ಮತ್ತೊಂದ್ಕಡೆ ಕಿಂಗ್ ನಾಗಾರ್ಜುನ್​ರ ಘೋಸ್ಟ್. ಯೆಸ್.. ಎರಡೂ ಬೇರೆ ಬೇರೆ ಜಾನರ್ ಚಿತ್ರಗಳಾಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿವೆ. ಅದ್ರಲ್ಲೂ ಮಲಯಾಳಂನ ಲೂಸಿಫರ್ ರಿಮೇಕ್ ಗಾಡ್​ಫಾದರ್ ಚಿರು ಕರಿಯರ್​ನ ಮಹತ್ವದ ಚಿತ್ರವಾಗಿ ಹೊರಹೊಮ್ಮುವ ಮನ್ಸೂಚನೆ ನೀಡಿದೆ.

ಬಾಲಿವುಡ್ ಅಂಗಳದಿಂದಲೂ ಹೃತಿಕ್ ರೋಷನ್- ಸೈಫ್ ಆಲಿ ಖಾನ್ ನಟನೆಯ ಮಲ್ಟಿಸ್ಟಾರರ್ ವಿಕ್ರಂ ವೇದ, ಸೆಪ್ಟೆಂಬರ್ 30ರಂದೇ ರಿಲೀಸ್ ಆಗ್ತಿದೆ. ​ಇದು ತಮಿಳುನ ಬ್ಲಾಕ್ ಬಸ್ಟರ್ ವಿಕ್ರಂ ವೇದ ರಿಮೇಕ್ ಆಗಿದ್ದು, ಟೀಸರ್, ಟ್ರೈಲರ್ ಹಾಗೂ ಮೇಕಿಂಗ್​ನಿಂದ ಅತೀವ ನಿರೀಕ್ಷೆ ಮೂಡಿಸಿದೆ. ಮೂಲ ನಿರ್ದೇಶಕರೇ ಇದಕ್ಕೂ ಆ್ಯಕ್ಷನ್ ಕಟ್ ಹೇಳಿರೋದ್ರಿಂದ ಸಹಜವಾಗಿಯೇ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಒಟ್ಟಾರೆ ಈ ದಸರಾ ಬಾಕ್ಸ್ ಆಫೀಸ್ ದಂಗಲ್​ನಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಿಂದ ಬರೋಬ್ಬರಿ ಏಳು ಚಿತ್ರಗಳು ಸೆಣಸಾಟ ನಡೆಸಲಿವೆ. ಇದ್ರಿಂದ ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್​​ ಕ್ಲ್ಯಾಶ್ ಆಗಲಿದ್ದು, ಯಾವ್ಯಾವ ಸಿನಿಮಾ ಎಷ್ಟೆಸ್ಟು ಸ್ಕ್ರೀನ್ಸ್​ನ ಆವರಸಿಕೊಳ್ಳಲಿದೆ ಅನ್ನೋದನ್ನ ಕಾದುನೋಡಬೇಕಿದೆ. ಒಟ್ಟಾರೆ ದಸರಾ ವೆಕೇಷನ್​ ಮೂಡ್​ನಲ್ಲಿರೋ ಜನಕ್ಕೆ ಮಸ್ತ್ ಮನರಂಜನೆ ಅಂತೂ ಸಿಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments