Monday, September 8, 2025
HomeUncategorizedನೊಯ್ಡಾದಲ್ಲಿ ಗೋಡೆ ಕುಸಿದು 4 ಸಾವು

ನೊಯ್ಡಾದಲ್ಲಿ ಗೋಡೆ ಕುಸಿದು 4 ಸಾವು

ನವದೆಹಲಿ : ಉತ್ತರ ಪ್ರದೇಶದ ನೊಯ್ಡಾದಲ್ಲಿ ಇಂದು ಬೆಳಗ್ಗೆ ವಸತಿ ಸಂಕೀರ್ಣವೊಂದರ ಗಡಿ ಗೋಡೆ ಕುಸಿದ ಪರಿಣಾಮ ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ರಕ್ಷಣಾ ಕಾರ್ಯಕ್ಕಾಗಿ ಅವಶೇಷಗಳನ್ನು ತೆರವುಗೊಳಿಸಲು ಬುಲ್ಡೋಜರ್‌ಗಳು ಕಾರ್ಯನಿರ್ವಹಿಸುತ್ತಿವೆ. ನೊಯ್ಡಾ ಪ್ರಾಧಿಕಾರವು ಸೆ.21ರಲ್ಲಿ ಜಲ ವಾಯುವಿಹಾರ್ ಬಳಿ ಒಳಚರಂಡಿ ದುರಸ್ತಿ ಕಾಮಗಾರಿಯ ಗುತ್ತಿಗೆಯನ್ನು ನೀಡಿತ್ತು. ಕಾರ್ಮಿಕರು ಇಟ್ಟಿಗೆಗಳನ್ನು ಹೊರತೆಗೆಯುವಾಗ ಗೋಡೆ ಕುಸಿದಿದೆ ಎಂದು ತಿಳಿಸಲಾಗಿದೆ.

ಇನ್ನು, ಈ ಬಗ್ಗೆ ತನಿಖೆ ಮಾಡಲಾಗುವುದು. ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಯಲ್ಲಿ ತಲಾ 2 ಸಾವುಗಳ ಮಾಹಿತಿಯನ್ನು ಸ್ವೀಕರಿಸಲಾಗಿದೆ ಎಂದು ನೊಯ್ಡಾ ಜಿಲ್ಲಾಡಳಿತ ತಿಳಿಸಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೊಯ್ಡಾ ಸೆಕ್ಟರ್ 21ರಲ್ಲಿ ಗೋಡೆ ಕುಸಿದ ಘಟನೆಯಿಂದಾಗಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡುವುದಾಗಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments