Tuesday, August 26, 2025
Google search engine
HomeUncategorizedರಾಜ್ಯದಲ್ಲಿ ರೈತರ ಆತ್ಮಹತ್ಯೆ ಅಂಕಿಅಂಶ ಬಿಡುಗಡೆ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಅಂಕಿಅಂಶ ಬಿಡುಗಡೆ

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಅತಿವೃಷ್ಟಿಯೂ, ತೀವ್ರ ಅನಾವೃಷ್ಟಿಯೂ, ಬ್ಯಾಂಕ್ ಸಾಲ ಸೇರಿದಂತೆ ವಿವಿಧ ಕಾರಣಕ್ಕೆ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಅಂಕಿಅಂಶ ಬಿಡುಗಡೆಯಾಗಿದೆ.

2013 ರಿಂದ 2022 ರವರೆಗೆ ಒಟ್ಟು 8245 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 5341, ಬಿಜೆಪಿ ಸರ್ಕಾರದ ಅವಧಿಯಲ್ಲಿ 2094 ರೈತರು ಆತ್ಮಹತ್ಯೆ ಪ್ರಕರಣ ಈ ಅಂಕಿಅಂಶ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿದಿರುವ ಆಶಾದಾಯಕ ಬೆಳವಣಿಗೆಗೆ ರಾಜ್ಯ ಸಾಕ್ಷಿಯಾಗಿದೆ.

ಸಿಎಂ ಬೊಮ್ಮಾಯಿ ಜಿಲ್ಲೆ ಹಾವೇರಿಯಲ್ಲಿ 2020 ರಿಂದ 2022ರ ವರೆಗೆ 131 ರೈತರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ 2020 ರಿಂದ 2022 ರವರೆಗೆ 80 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವ ವರ್ಷ ಎಷ್ಟು ಆತ್ಮಹತ್ಯೆ ಪ್ರಕರಣ

2013 ರಿಂದ 2014 – 89
2014 ರಿಂದ 2015 – 117
2015 ರಿಂದ 2016 – 1525
2016 ರಿಂದ 2017 – 1203
2017 ರಿಂದ 2018 – 1323
2018 ರಿಂದ 2019 – 1084
2019 ರಿಂದ 2020 – 1091
2020 ರಿಂದ 2021 – 851
2021 ರಿಂದ 2022 – 859
2022 ರಿಂದ 2023 – 103

RELATED ARTICLES
- Advertisment -
Google search engine

Most Popular

Recent Comments