Wednesday, August 27, 2025
HomeUncategorizedಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶಾಲೆ ನಿರ್ಮಿಸಿದ ‘ಕೈ’ ನಾಯಕ

ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶಾಲೆ ನಿರ್ಮಿಸಿದ ‘ಕೈ’ ನಾಯಕ

ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಸಿಲಿಕಾನ್‌ ಸಿಟಿ ಮಾನ ಹರಾಜು ಆಗಿದ್ದು, ಬರೋಬ್ಬರಿ ನೂರು ಮೀಟರ್​​ಗೂ ಹೆಚ್ಚು ರಾಜಕಾಲುವೆಯನ್ನು ನಲಪಾಡ್​ ಒತ್ತುವರಿ ಮಾಡಿಕೊಂಡಿದ್ದಾರೆ.

ನಗರದಲ್ಲಿ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶಾಲೆ ನಿರ್ಮಿಸಿದ ‘ಕೈ’ ನಾಯಕ, ಒತ್ತುವರಿ ಮಾಡಿಕೊಂಡು ಅಧಿಕಾರಿಗಳ ಮುಂದೆನೇ ಎಗರಾಡಿದ ನಲಪಾಡ್‌, ಇಡೀ ರಾಜ್ಯಕ್ಕೆ ಮಾದರಿಯಾಗಬೇಕಾದ ಅವರು, ಒತ್ತುವರಿ ಮಾಡಿರುವ ಭೂಗಳ್ಳರ ಪಟ್ಟಿಯಲ್ಲಿ ರಾಜಕಾರಣಿಗಳೇ ಮೇಲು ಗೈ ಮಾಡಿದ್ದಾರೆ.

ಇನ್ನು, ಒತ್ತುವರಿ ಮಾಡಿದ್ದಲ್ಲದೇ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ದವಲತ್ತು ತೋರಿದ್ದು, ಇದು ಬೇರೆ ಯಾರು ಇಡೀ ರಾಜ್ಯಕ್ಕೆ ಮಾದರಿಯಾಗ ಬೇಕಿರೋ ನಾಯಕನ ಒತ್ತುವರಿ ವಿಷಯ ಬಂದಾಗ, ಮೈಯೆಲ್ಲಾ ಉರಿದು ಅಧಿಕಾರಿಗಳ ಮೇಲೆ ಎಗರೆಗರಿ ಬಿದ್ದ ದೃಷ್ಯ ಪವರ್ ಟಿವಿಯಲ್ಲಿ ಲಭ್ಯವಾಗಿದೆ. ಬರೋಬ್ಬರಿ ನೂರು ಮೀಟರ್ ಹೂ ಹೆಚ್ಚು ರಾಜಕಾಲುವೆ ಒತ್ತುವರಿ ಮಾಡಿರೋ ನಲಪಾಡ್​ ಒತ್ತುವರಿ ತೆರವು ಮಾಡಲು ಬಂದ ಅಧಿಕಾರಿಗಳ ಮೇಲೆ ನಲಪಾಡ್​ ಕಿಡಿಕಾಡಿದ್ದಾರೆ.

ಅದಲ್ಲದೇ, ಇದೇ ಪ್ರವಾಹ ಬಂದಾಗ ಟ್ರಾಕ್ಟರ್​​ನಲ್ಲಿ ಸ್ಥಳಕ್ಕೆ ಹೋಗಿ ಬಿಟ್ಟಿ ಬಿಲ್ಡಪ್ ಜೊತೆ ಫೋಟೋ ಗೆ ಪೋಸ್ ಕೊಟ್ಟು ಬಂದಿದ್ದ ನಲಪಾಡ್​ ಆದ್ರೆ ಈಗ ತಾವೇ ಒತ್ತುವರಿ ಮಾಡಿರೋ ಜಾಗವನ್ನ ಬಿಟ್ಟುಕೊಡಲು ಸಿದ್ದವಿಲ್ಲ.

RELATED ARTICLES
- Advertisment -
Google search engine

Most Popular

Recent Comments