Thursday, August 28, 2025
HomeUncategorizedನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಭಯವಿದೆ : ಸಿದ್ದರಾಮಯ್ಯ

ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಭಯವಿದೆ : ಸಿದ್ದರಾಮಯ್ಯ

ಬಾಗಲಕೋಟೆ : ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಈಗಲೇ ಭಯವಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಬಿಜೆಪಿಯವರಿಗೆ ಈಗಲೇ ಭಯವಿದೆ. ಹೀಗಾಗಿ ಬಿಜೆಪಿಯವರೆಲ್ಲಾ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯರ ವೀರಾವೇಶದ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇವರ ಭಾಷಣ ಮಾಡೋವಾಗ ಜನ ಎದ್ದು ಹೋದ್ರು ಅಲ್ಲೇ ಇವರ ಧಮ್ ತೋರಿಸೋಕೆ ಆಗಲಿಲ್ಲ. ಜನ ಇವರ ಧಮ್ ಈಗಾಗಲೇ ನೋಡಿ ಬಿಟ್ಟಿದ್ದಾರೆ. ಅದಕ್ಕಾಗಿಯೇ ಖಾಲಿ ಖುರ್ಚಿಗಳ ಮುಂದೆ ವೀರಾವೇಷದ ಭಾಷಣ ಮಾಡಿದ್ದಾರೆ. ಸ್ಮೃತಿ ಇರಾಣಿ ಮಾತನಾಡೋವಾಗ ಎಲ್ಲಾ ಖಾಲಿ ಕುರ್ಚಿಗಳೇ. ಬೊಮ್ಮಾಯಿ ಖಾಲಿ ಕುರ್ಚಿ ಮುಂದೆ ಜಂಬ ಕೊಚ್ಚಿಕೊಂಡು ವೀರಾವೇಶದಿಂದ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು, ಹಾನಗಲ್​ನಲ್ಲೂ ಹೀಗೆ ವೀರವೇಶದಿಂದ ಮಾತನಾಡಿದ್ರು, ಅಲ್ಲಿಯೇ ನಮ್ಮ ಧಮ್ ಗೊತ್ತಾಯ್ತು ಅವರಿಗೆ. ಸಿಎಂಗೆ ಪಕ್ಕದ ಹಾನಗಲ್ ಬೈ ಎಲೆಕ್ಷನ್ ಗೆಲ್ಲೋಕೆ ಆಗಲಿಲ್ಲ. ರಾಜ್ಯದಲ್ಲಿ ಇವರಿಗೆ ಗೆಲ್ಲಿಸೋಕೆ ಆಗುತ್ತಾ. ನನ್ನನ್ನು ಟಾರ್ಗೆಟ್ ಮಾಡಿಕೊಂಡು ಎಲ್ಲರೂ ಮಾತನಾಡಿದ್ದಾರೆ. ಸಿದ್ದರಾಮಯ್ಯನೇ ಅವರಿಗೆ ಟಾರ್ಗೆಟ್. ಅದರ ಅರ್ಥ ಮುಂದೆ ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಭಯವಿದೆ. ಭಯ ಇಲ್ಲದೆ ಹೋದರೆ ನನ್ನ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ. ದಾವಣಗೆರೆ ಕಾರ್ಯಕ್ರಮ ಬಳಿಕ ಬಿಜೆಪಿಯವರಿಗೆ ಹತಾಶೆಯಾಗಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments