ಮೈಸೂರು : ಕಳೆದ 15 ದಿನಗಳಿಂದ ಮೈಸೂರಿನ ಹೊರವಲಯದಲ್ಲಿರುವ RBI ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ರಾತ್ರಿ ವೇಳೆ ಎರಡು ಮರಿಗಳೊಂದಿಗೆ ಚಿರತೆ ಓಡಾಟ ಮಾಡುತ್ತಿರುವ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಚಿರತೆ ಸೆರೆ ಹಿಡಿಯುವಂತೆ ಆರ್ಬಿಐ ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯದ ಶಾಲಾ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಓಡಾಟ ನಡೆಸಿರುವ ಪ್ರದೇಶಗಳಲ್ಲಿ 3 ಬೋನ್ ಇರಿಸಿದ್ದಾರೆ. ಚಿರತೆ ಓಡಾಟದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.


