Saturday, August 23, 2025
Google search engine
HomeUncategorizedಶ್ರೀಗಳ ಬೆಡ್‌ರೂಂನಲ್ಲಿ 2 ಗಂಟೆ ಖಾಕಿ ತಲಾಶ್

ಶ್ರೀಗಳ ಬೆಡ್‌ರೂಂನಲ್ಲಿ 2 ಗಂಟೆ ಖಾಕಿ ತಲಾಶ್

ಚಿತ್ರದುರ್ಗ :  ಡಾ.ಶಿವಮೂರ್ತಿ ‌ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಆರೋಪದ ಪೋಕ್ಸೊ ಪ್ರಕರಣದಲ್ಲಿ ತನಿಖಾ ತಂಡ ದಿಂದ ವಿಚಾರಣೆ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿ ಇರುವ ಮುರುಘಾ ಶರಣರಿಗೆ ತನಿಖಾಧಿಕಾರಿ ಅನಿಲ್ ಕುಮಾರ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಬೆಳಗ್ಗೆ ಪ್ರಥಮವಾಗಿ ವಿಚಾರಣೆ ನಡೆಸಿ ಶ್ರಿಗಳನ್ನು ಶ್ರೀಮಠಕ್ಕೆ ಕರೆದೊಯ್ದು ಘಟನೆ ಬಗ್ಗೆ ಸ್ಥಳ ಮಹಜರು ನಡೆಸಲಾಯಿತು. ಸಂತ್ರಸ್ತ ಬಾಲಕಿಯರ ಹೇಳಿಕೆಗಳನ್ನು ಆಧರಿಸಿ ತನಿಖಾ ತಂಡ ಹಲವಾರು ಆಯಾಮಗಳಲ್ಲಿ ಮಹಜರು ಮಾಡಿದ್ದಾರೆ. ಶ್ರೀಗಳ ಬೆಡ್​ ರೂಂ, ದರ್ಬಾರ್ ಹಾಲ್ ಸೇರಿದಂತೆ ಹಲವೆಡೆ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ DySP ಅನಿಲ್‌ಕುಮಾರ್ ನೇತೃತ್ವದ ತನಿಖಾ ತಂಡ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಇನ್ನು ಸ್ಥಳ ಮಹಜರು ವೇಳೆ ಸುಮಾರು 15ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿದ್ದರು. ಈ ವೇಳೆ ಮುರುಘಾ ಶರಣರ ಸ್ಥಿತಿ ನೋಡಿ ಕೆಲ ಭಕ್ತರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಎಲ್ಲಾ ಮಹಜರು ಸನ್ನಿವೇಶಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಒಟ್ಟಾರೆ ಸೋಮವಾರ ಚಿತ್ರದುರ್ಗ ‌ಜಿಲ್ಲಾ‌ನ್ಯಾಯಾಲಯ ಮುರುಘಾ ಶರಣರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಮತ್ತೊಂದು ಕಡೆ ಪೊಲೀಸ್ ಕಸ್ಟಡಿಗೆ ನೀಡಲಾದ ಸಮಯ ಕೊನೆಗೊಳ್ಳಲಿದೆ. ಹೀಗಾಗಿ ಶರಣರನ್ನು ತನಿಖಾ ತಂಡ ಕೊರ್ಟ್‌ಗೆ ಹಾಜರು ಪಡಿಸಲಿದೆ.ಸೋಮವಾರ ಶರಣರಿಗೆ ಜಾಮೀನು ಸಿಗುತ್ತೊ ಅಥವಾ ಪೊಲೀಸ್ ಕಸ್ಟಡಿ ಮುಂದುವರೆಯುತ್ತಾ ಕಾದು ನೊಡಬೇಕಿದೆ.

ಸುನಿಲ್ ರೆಡ್ಡಿ ಪವರ್ ಟಿವಿ, ಚಿತ್ರದುರ್ಗ

RELATED ARTICLES
- Advertisment -
Google search engine

Most Popular

Recent Comments