Monday, August 25, 2025
Google search engine
HomeUncategorizedಇಂದು ವಿಶ್ವ ಪತ್ರಿಕಾ ವಿತರಕರ ದಿನ

ಇಂದು ವಿಶ್ವ ಪತ್ರಿಕಾ ವಿತರಕರ ದಿನ

ಇಂದು ವಿಶ್ವ ಪತ್ರಿಕಾ ವಿತರಕರ ದಿನ. ಮಳೆ, ಗಾಳಿ ಎನ್ನದೆ ದುಡಿಯುವ ಪತ್ರಿಕಾ ಯೋಧರು ಈಗ ಕೊರೋನಾ ಸಂಕಷ್ಟದಲ್ಲೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಸೋಂಕು ಹರಡುತ್ತದೆ ಎಂಬ ವದಂತಿಗಳು ಹರಡಿದರೂ ಎದೆಗುಂದದೆ ಪತ್ರಿಕೆ ಹಂಚಿ ವದಂತಿಗಳು ಸುಳ್ಳು ಎಂಬುದನ್ನು ತೋರಿಸಿಕೊಟ್ಟರು.

ಮಾಧ್ಯಮಗಳು ಮತ್ತು ಜನರ ನಡುವಿನ ಸೇತುವೆಯಾಗಿರುವ ಪತ್ರಿಕಾ ವಿತರಕರು ಸದಾ ಸ್ಮರಣೀಯರು. ಇಂದು ಜಗತ್ತಿನಾದ್ಯಂತ ವಿಶ್ವ ಪತ್ರಿಕಾ ವಿತರಕರ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಪತ್ರಿಕಾ ವಿತರಕರ ದಿನಕ್ಕೆ ಶುಭ ಕೋರಿದ ಸಿಎಂ ಬಸವರಾಜ್​​​​​​​​​​​​​​​​​ ಬೊಮ್ಮಾಯಿ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು. ಮಳೆ, ಚಳಿ, ಗಾಳಿ, ಇವೆಲ್ಲವನ್ನೂ ಲೆಕ್ಕಿಸದೇ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಎಲ್ಲಾ ಪತ್ರಿಕಾ ವಿತರಕರಿಗೂ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಶುಭಾಶಯಗಳು ಎಂದು ಟ್ವೀಟ್​​​ ಮಾಡಿ ಶುಭಕೋರಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments