Monday, August 25, 2025
Google search engine
HomeUncategorizedಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣ ಇರಬೇಕು : ಸಂಸದ ಮುದ್ದಹನುಮೆಗೌಡ

ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣ ಇರಬೇಕು : ಸಂಸದ ಮುದ್ದಹನುಮೆಗೌಡ

ಬೆಂಗಳೂರು : ಒಂದು ಪಕ್ಷ ಬಿಡಲು ಬಲವಾದ ಕಾರಣ, ಅದು ಪಕ್ಷದಿಂದ ಆಗಿರಬೇಕು ಮತ್ತು ಇಲ್ಲ ನನ್ನಿಂದ ಆಗಿರಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಮುದ್ದಹನುಮೆಗೌಡ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಬಂದಿದ್ದೇನೆ. ಅದು ನನ್ನಿಂದ ಕಡೆ ಆದ್ರೆ ಪಕ್ಷ ಸ್ಪಷ್ಟವಾಗಿ ಹೇಳಿಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ..? ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ ಎಂದರು.

ಇನ್ನು, 1989ರಲ್ಲಿ ಕಾಂಗ್ರೆಸ್ ಬಿ ಪಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ರು. ನಂತರ 2019ರಲ್ಲಿ ಸಂಸದ ಆಗಿದ್ರು ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರೀ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ಕಾಂಗ್ರೆಸ್ ಪಕ್ಷ ಶಾಸಕ, ಸಂಸದರಾಗಿ ಆಯ್ಕೆಯಾಗಲು ಅವಕಾಶ ಕೊಟ್ರು. ನಾನು ಅತ್ಯಂತ ಕ್ರೀಯಾ ಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದಾ ಅಳಿಲು ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯು ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ. ಪಕ್ಷಕ್ಕೆ ಕೂಡ ನನ್ನ ರಾಜೀನಾಮೆ ಪತ್ರ ಸಿಲ್ಲಿಸುತ್ತೇನೆ ಎಂದರು.

ಆದಲ್ಲದೇ, ನಾಲ್ಕು ಬಾರೀ ಸ್ಪರ್ಧೆದಿಂದ ತಪ್ಪಿಸಲು ಅಂತಹ ಅನಿವಾರ್ಯ ಇರಲಿಲ್ಲ. ಸಿದ್ದರಾಮಯ್ಯ ಅವರು ಇಂತಹ ನಿರ್ಧಾರ ಮಾಡಬೇಡಿ ಎಂದು ಹೇಳಿದ್ರು. ನನ್ನ ರಾಜಕೀಯ ಜೀವನದಲ್ಲಿ ಯಾವ ರೀತಿ ಎದುರಿಸಿದೆ ಎಂದು ಜನರಿಗೆ ಗೊತ್ತಿದೆ. ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಇಷ್ಟು ವರ್ಷಗಳ ನಡೆದ ರಾಜಕೀಯ ದೊರಣೆಗಳು ಇಂತಹ ಪರಿಸ್ಥಿತಿಗೆ ಕಾರಣ. ಇವತ್ತು ಈ ನಿರ್ಧಾರ ಮಾಡಿದ್ದೇನೆ, ಮುಂದೆ ಒಳ್ಳೆಯ ಅವಕಾಶಗಳು ಬರುತ್ತವೆ ಎಂದರು.

RELATED ARTICLES
- Advertisment -
Google search engine

Most Popular

Recent Comments