Tuesday, August 26, 2025
Google search engine
HomeUncategorizedಭಾವೈಕ್ಯತೆಗೆ ಸಾಕ್ಷಿಯಾದ ಪೊಲೀಸ್ ಇನ್ಸಪೆಕ್ಟರ್ ಜಾಕಿರ್ ಬಾಷಾ ಗಣೇಶ ಆಚರಣೆ

ಭಾವೈಕ್ಯತೆಗೆ ಸಾಕ್ಷಿಯಾದ ಪೊಲೀಸ್ ಇನ್ಸಪೆಕ್ಟರ್ ಜಾಕಿರ್ ಬಾಷಾ ಗಣೇಶ ಆಚರಣೆ

ಹುಬ್ಬಳ್ಳಿ: ಒಂದೆಡೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಪರ-ವಿರೋಧ ಹೋರಾಟ ನಡೆಯುತ್ತಿದ್ದರೇ, ಇತ್ತ ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆ ಇನ್ಸೆಕ್ಟರ್ ಕಾಲಿಮಿರ್ಚಿ ತಮ್ಮ ಪೋಲಿಸ್ ಠಾಣೆಯಲ್ಲಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಜಾತಿ, ಧರ್ಮಗಳ ನಡುವೆ ಒಡಕುಂಟು ಮಾಡುವ ಕಿಡಿಗೇಡಿಗಳಿಗೆ ಮಾದರಿಯಾಗಿದ್ದಾರೆ.

ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ಅದರಲ್ಲೂ ಠಾಣೆಯ ಇನ್ಸೆಕ್ಟರ್ ಮಾಡಿರುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದು ಗಣೇಶ ಹಬ್ಬ ಹಿನ್ನಲೆಯಲ್ಲಿ ಪೊಲೀಸ್​ ಠಾಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ-ಧರ್ಮಗಳ ಗೋಡೆ ಕಟ್ಟಿಕೊಂಡವರ ಮಧ್ಯೆ ಇನ್ಸೆಕ್ಟರ್‌ ಜಾಕೀರ ಪಾಷಾ ಕಾಲಿಮಿರ್ಚಿ ಭಾವೈಕ್ಯತೆ ಮೆರೆದಿದ್ದಾರೆ.

ಸಮಾಜದಲ್ಲಿ ಸರ್ವಧರ್ಮ ಭಾವೈಕ್ಯತೆಯೇ ಮುಖ್ಯ ಎನ್ನುವ ಮಾತಿಗೆ ಹುಬ್ಬಳ್ಳಿ ಗೊಕುಲ್ ರೋಡ್ ಪೊಲೀಸ್ ಠಾಣಾ ಮುಖ್ಯಾಧಿಕಾರಿ ಜಾಕೀರಪಾಷಾ ಕಾಲಿಮಿರ್ಚಿ ಅವರು ಮತ್ತು ಠಾಣೆಯ ಎಲ್ಲಾ ಸಿಬ್ಬಂದಿ ತಾವೇ ಸ್ವತಃ ಗಣೇಶ ನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಭಾವೈಕ್ಯತೆ ಮೆರೆದಿದ್ದಾರೆ.

ಸದಾ ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾದ ಗೊಕುಲ್ ರೋಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಜಾಕೀರಪಾಷಾ ಕಾಲಿಮಿರ್ಚಿ ಇಂದು ಸ್ವತಃ ತಾವೇ ತಮ್ಮ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ. ಹಣೆಗೆ ತಿಲಕ ಇಟ್ಟು ಕೊಂಡು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪೊಲೀಸ್ ಜೀಪಿನಲ್ಲಿ ತೆರಳಿ ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ-ಧರ್ಮಗಳ ಗೊಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಗೆ ಏಕರೂಪ ನೀಡಿದ್ದಾರೆ. ಈ ಒಂದು ಕಾರ್ಯಕ್ಕೆ ಠಾಣೆಯ ಎಲ್ಲಾ ಸಿಬ್ಬಂದಿ ಸಾಥ್ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments