Saturday, August 23, 2025
Google search engine
HomeUncategorizedನಾಳೆ ನೂರಕ್ಕೆ ನೂರಷ್ಟು ಗಣೇಶ ಹಬ್ಬ ಆಚರಿಸುತ್ತೇವೆ: ಪ್ರಮೋದ್ ಮುತಾಲಿಕ್​

ನಾಳೆ ನೂರಕ್ಕೆ ನೂರಷ್ಟು ಗಣೇಶ ಹಬ್ಬ ಆಚರಿಸುತ್ತೇವೆ: ಪ್ರಮೋದ್ ಮುತಾಲಿಕ್​

ಧಾರವಾಡ: ನಾಳೆ ನೂರಕ್ಕೆ ನೂರಷ್ಟು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಆಗುತ್ತದೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಪಾಲಿಕೆ ಆದೇಶ ನೀಡಿದ ಹಿನ್ನಲೆಯಲ್ಲಿ ಇದನ್ನ ಪ್ರಶ್ನಿಸಿ ಇಂದು ಮುಸ್ಲಿಂ ಸಂಘಟನೆಗಳು ಹೈಕೋರ್ಟ್​​ಗೆ ಹೋಗುತ್ತೇವೆ ಎಂದು ಹೇಳಿವೆ.  ಈ ಬಗ್ಗೆ ಮಾತನಾಡಿದ ಮುತಾಲಿಕ್​, ಹುಬ್ಬಳ್ಳಿ ಚನ್ನಮ್ಮ ಮೈದಾನ ವಿವಾದ ಹೈಕೋರ್ಟ್‌ಗೆ ಹೋಗಿತ್ತು. ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ನಿರ್ಣಯಕ್ಕೆ ಬಿಟ್ಟಿದ್ದಾರೆ. ನಾನು ಹೈಕೋರ್ಟ್ ಗೆ ನ್ಯಾಯ ಕೊಟ್ಟಿದ್ದಕ್ಕೆ ಅಭಿನಂದನೆ ಹೇಳುತ್ತೇನೆ ಎಂದರು.

ಈ ಹಿಂದೆಯೇ ಚನ್ನಮ್ಮ ಮೈದಾನದಲ್ಲಿ ಸುಪ್ರಿಂಕೋರ್ಟ್ ಎರಡೇ ಎರಡು ಸಲ ನಮಾಜ ಮಾಡಬಹುದು ಎಂದು ಹೇಳಿದೆ, ಮಾಲಿಕರು ಅಲ್ಲ ಅವರು, ಅವರು ಸಂಬಂಧ ಕೂಡಾ ಇಲ್ಲಾ, ಅಂಜುಮನ್ ಇಸ್ಲಾಂನವರು ಇದಕ್ಕೆ ಮಾಲೀಕರು ಅಲ್ಲ. ಪಾಲಿಕೆಯೇ ಅದರ ಮಾಲೀಕ. ಗಣೇಶ ಹಬ್ಬ ಮಾಡಿದರೆ ಸೌಹಾರ್ದ ಆಗುತ್ತಿತ್ತು.
ಆದರೆ, ಅಂಜುಮನ್ ಇಸ್ಲಾಂ ಈಗ ಅಫೀಲು ಹೋಗಿದೆ. ಈ ಮೂಲಕ ಲ್ಯಾಂಡ್ ಹೊಡೆಯುವ ಯತ್ನ ಮಾಡುತ್ತಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸೌಹಾರ್ದ ಬೇಡವಾಗಿದೆ. ಇವರಿಗೆ ಸಂವಿಧಾನದ ಅದೇಶ ಬೇಡಾಗಿದೆ, ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಇವರಿಗೆ ಜಗಳ ಗಲಾಟೆ ಲ್ಯಾಂಡ್ ಜಿಹಾದ್ ಬೇಕಾಗಿದೆ. ಜಾಗವನ್ನೇ ಕಬಳಿಸುವದು ಸರಿಯಲ್ಲ.

ಹಿಂದೂಗಳ ಆಚರಣೆ ಮೇಲೆ ನಂಬಿಕೆ ಇಲ್ಲಾ. ಇವರಿಗೆ ಗಲಾಟೆ ಗಲಭೆ ಮಾಡುವುದೇ ಮಾನಸಿಕತೆ‌ ಇದೆ. ಇದಕ್ಕೆ ಕಾಂಗ್ರೆಸ್ ಕಾರಣ, ಇವರ ಹಿಂದೆ ಕಾಂಗ್ರೆಸ್ ಇದೆ ಎಂದು ಮುತಾಲಿಕ್ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments