Tuesday, August 26, 2025
Google search engine
HomeUncategorizedಶಿಥಿಲಗೊಂಡಿರುವ 629 ಕಟ್ಟಡ ನೆಲಸಮಗೊಳಿಸಲು BBMPಯ ಪಟ್ಟಿ ಸಿದ್ಧ

ಶಿಥಿಲಗೊಂಡಿರುವ 629 ಕಟ್ಟಡ ನೆಲಸಮಗೊಳಿಸಲು BBMPಯ ಪಟ್ಟಿ ಸಿದ್ಧ

ಬೆಂಗಳೂರು: ಉತ್ತರ ಪ್ರದೇಶದ ನೋಯ್ಡಾದಲ್ಲಿ ಟ್ವಿನ್ ಟವರ್ ಡೆಮಾಲೀಷನ್ ಹಿನ್ನೆಲೆ ಬೆಂಗಳೂರಿನಲ್ಲಿ ಬಿಬಿಎಂಪಿ ಪುಲ್ ಅಲಾಟ್೯ ಆಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾ ವ್ಯವಸ್ಥೆಯಲ್ಲಿರುವ ಸುಮಾರು 629 ಹಳೇ ಕಟ್ಟಡಗಳನ್ನ ಬಿಬಿಎಂಪಿ ಗುರುತಿಸಿ ಪಟ್ಟಿ ಸಿದ್ದಪಡಿಸಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಬರೋಬ್ಬರಿ 629 ಹಳೇ ಕಟ್ಟಡಗಳನ್ನ ಬಿಬಿಎಂಪಿ ಗುರುತಿಸಿದ್ದು, ಇದರಲ್ಲಿ 423 ಕಟ್ಟಡ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಕೂಡಲೇ ತಾವು ಕಟ್ಟಡವನ್ನ ಡೆಮಾಲೀಷನ್ ಮಾಡಬೇಕೆಂದು ತಾಕೀತು ಮಾಡಿದೆ ಎಂದು ವಿಶೇಷ ಆಯುಕ್ತರು ಬಿಬಿಎಂಪಿ ತಿಳಿಸಿದ್ದಾರೆ.

ಈ ಕೂಡಲೇ ಕಟ್ಟಡ ಡೆಮಾಲೀಷನ್ ಮಾಡದಿದ್ರೆ ಅದರ ವೆಚ್ಚವನ್ನು ಬರಿಸಿ ಅಂತ ನೋಟೀಸ್ ನೀಡಲಾಗಿದ್ದು, ಕಟ್ಟಡ ಡೆಮಾಲೀಷನ್ ಗೆ ಈಗಾಗಲೇ ಏಜೆನ್ಸಿ ಜೊತೆ  ಬಿಬಿಎಂಪಿ ಒಪ್ಪಂದ ಮಾಡಿದೆ.

ಪೂರ್ವ ವಲಯದಲ್ಲಿ- 101, ಪಶ್ಚಿಮ ವಲಯದಲ್ಲಿ- 160, ದಕ್ಷಿಣ ವಲಯದಲ್ಲಿ- 216, ಬೊಮ್ಮನಹಳ್ಳಿ ವಲಯದಲ್ಲಿ- 11, ದಾಸರಹಳ್ಳಿ ವಲಯದಲ್ಲಿ – 11, ಮಹದೇವಪುರ ವಲಯದಲ್ಲಿ- 37, ರಾಜರಾಜೇಶ್ವರಿ ವಲಯದಲ್ಲಿ- 9, ಯಲಹಂಕ ವಲಯದಲ್ಲಿ – 84, ಕಟ್ಟಡಗಳು ಶಿಥಲಾ ವ್ಯವಸ್ಥೆಯಲ್ಲಿ ಇವೆ. ಮಳೆಗಾಲ ಮುಗಿಯೋದ್ರಲ್ಲಿ ಕಟ್ಟಡಗಳ ತೆರವು ಬಗ್ಗೆ ಮಾಹಿತಿ ನೀಡಿಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments