Thursday, September 4, 2025
HomeUncategorized25ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ‌

25ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ‌

ಬೆಳಗಾವಿ : ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ, ಚಿರತೆ ಸೆರೆ ಕಾರ್ಯಾಚರಣೆ‌ 25ನೇ ದಿನಕ್ಕೆ ಕಾಲಿಟ್ಟಿದೆ. ಆರು ದಿನ ಆನೆಗಳಿಂದ ಹುಡುಕಿದ್ರೂ ಚಿರತೆ ಸೆರೆಯಾಗಿಲ್ಲ. ಇಂದು ಎಂಬತ್ತು ಜನ ಸಿಬ್ಬಂದಿ, ಜೆಸಿಬಿ, ಆನೆಗಳಿಂದ ಚಿರತೆ ಸೆರೆಗೆ ಪ್ಲ್ಯಾನ್ ಮಾಡಲಾಗಿದೆ.

ಪ್ರತಿದಿನ 250 ಎಕರೆ ಪ್ರದೇಶದಲ್ಲಿರುವ ಗಾಲ್ಫ್ ಮೈದಾನವನ್ನು ಸಿಬ್ಬಂದಿ ಶೋಧ ಮಾಡುತ್ತಿದ್ದಾರೆ. ಚಿರತೆ ಸೆರೆಯಾಗದ ಹಿನ್ನೆಲೆ ಎರಡು ದಿನಗಳಿಂದ ಹನಿಟ್ರ್ಯಾಪ್ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಚಿರತೆ ಸೆರೆಗೆ ಇಟ್ಟಿರುವ ಬೋನ್ ನಲ್ಲಿ ಹೆಣ್ಣು ಚಿರತೆ ಮೂತ್ರ ಸಿಂಪಡಣೆ ಮಾಡಲಾಗಿದೆ. ಈ ಮೂಲಕ ಚಿರತೆ‌ಯನ್ನ ಲೈಂಗಿಕವಾಗಿ ಆಕರ್ಷಣೆ ಮಾಡಿ ಖೆಡ್ಡಾಗಿ ಬೀಳಿಸುವ ಪ್ಲ್ಯಾನ್ ಮಾಡಲಾಗಿದೆ. ಆದರು ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ.

ಇನ್ನು, ಸೆರೆಯಾಗದ ಚಿರತೆಯಿಂದಾಗಿ ಬೆಳಗಾವಿ ನಗರ ಜನರಲ್ಲಿ ಆತಂಕ ದೂರವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಿದ್ಧಪಡಿಸಿದ ಮಾಸ್ಟರ್ ಪ್ಲಾನ್​ನಂತೆ ಇಂದು 350 ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments