Thursday, September 11, 2025
HomeUncategorizedಬಿಜೆಪಿ ಸರ್ಕಾರದ ವಿರುದ್ಧ ಕೇಜ್ರಿವಾಲ್​​​ ಕಿಡಿ

ಬಿಜೆಪಿ ಸರ್ಕಾರದ ವಿರುದ್ಧ ಕೇಜ್ರಿವಾಲ್​​​ ಕಿಡಿ

ನವದೆಹಲಿ : ದೇಶದಲ್ಲಿ ಇತರ ಪಕ್ಷಗಳ ಸರ್ಕಾರ ಉರುಳಿಸಲು ಬಿಜೆಪಿ 6,300 ಕೋಟಿ ವೆಚ್ಚ ಮಾಡದಿದ್ದರೆ ಕೇಂದ್ರ ಸರ್ಕಾರ ಆಹಾರದ ಪದಾರ್ಥಗಳ ಮೇಲೆ GST ವಿಧಿಸುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​​ ಹೇಳಿದ್ದಾರೆ.

ಬಿಜೆಪಿ ರಾಜ್ಯ ಸರ್ಕಾರಗಳ ಸರಣಿ ಹಂತಕ ಎಂದು ಕರೆದ ನಂತರ ಕೇಜ್ರಿವಾಲ್ ಈ ರೀತಿಯ ಆರೋಪ ಮಾಡಿದ್ದಾರೆ. ದೆಹಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ GST ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಸಂಗ್ರಹಿಸಿದ ಹಣವನ್ನು ಶಾಸಕರ ಖರೀದಿಗೆ ಬಳಸಿಕೊಳ್ಳುತ್ತಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೆ, ಇತರ ಪಕ್ಷಗಳ ಶಾಸಕರ ಖರೀದಿಗೆ ಬಿಜೆಪಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಮೊಸರು, ಬೆಣ್ಣೆ, ತುಪ್ಪ, ಗೋಧಿ, ಅಕ್ಕಿ ಮತ್ತಿತರ ವಸ್ತುಗಳ ಮೇಲೆ GST ವಿಧಿಸಿ, ವರ್ಷಕ್ಕೆ 7.500 ಕೋಟಿ ರೂ. ಆದಾಯವನ್ನು ಕೇಂದ್ರ ಸರ್ಕಾರ ಸಂಗ್ರಹಿಸಲಿದೆ.

ಸರ್ಕಾರಗಳ ಪತನಕ್ಕೆ ಇಲ್ಲಿಯವರೆಗೂ ಬಿಜೆಪಿ 6,300 ಕೋಟಿ ರೂ. ವೆಚ್ಚ ಮಾಡಿದೆ. ಅವರು ಸರ್ಕಾರಗಳನ್ನು ಉರುಳಿಸದಿದ್ದರೆ ಗೋಧಿ, ಅಕ್ಕಿ, ಮಜ್ಜಿಗೆ ಇತ್ಯಾದಿಗಳ ಮೇಲೆ GST ಹೇರಬೇಕಾಗುತ್ತಿರಲಿಲ್ಲ. ಜನರು ಹಣದುಬ್ಬರವನ್ನು ಎದುರಿಸಬೇಕಾಗಿರಲಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments