Friday, September 12, 2025
HomeUncategorizedಬಿಎಂಟಿಸಿ ವೋಲ್ವೋ ಬಸ್​ಗಳಿಗೆ ಹಿಡಿದಿದ್ಯಾ ಗ್ರಹಣ..?

ಬಿಎಂಟಿಸಿ ವೋಲ್ವೋ ಬಸ್​ಗಳಿಗೆ ಹಿಡಿದಿದ್ಯಾ ಗ್ರಹಣ..?

ಬೆಂಗಳೂರು : ಕಳೆದ ಎರಡೂವರೆ ವರ್ಷದಿಂದ ನಿಂತಲ್ಲೇ ನಿಂತ ವೋಲ್ವೋ ಬಸ್‌ಗಳು, 780 ಬಸ್‌ಗಳ ಪೈಕಿ ಕೇವಲ 200 ಬಸ್ ಮಾತ್ರ ನಿತ್ಯ ಸಂಚಾರ ಮಾಡುತ್ತಿದೆ.

ನಗರದ ವಿವಿಧ ಡಿಪೋಗಳಲ್ಲಿ ನಿಂತಲ್ಲೇ ನಿಂತಿವೆ 580 ವೋಲ್ವೋ ಬಸ್‌ಗಳು, ರೋಡ್ ಕ್ಲಿಯರೆನ್ಸ್ ಕಡಿಮೆ ಇರೋ ಉ.ಕರ್ನಾಟಕಕ್ಕೆ ಬಸ್‌ಗಳು ಸರಿಯಾಗಲ್ಲ. ಹೀಗಾಗಿ ಶೀಘ್ರದಲ್ಲಿ ಎಲ್ಲಾ 580 ವೋಲ್ವೋ ಬಸ್‌ಗಳು ಗುಜರಿ ಸೇರೋ ಸಾಧ್ಯತೆ ಇದೆ.

ಅದಲ್ಲದೇ, ಇತ್ತ ಎರಡನೇ ಹಂತದಲ್ಲಿ ರಸ್ತೆಗಿಳಿಯುತ್ತಿರೋ 300 ಎಲೆಕ್ಟ್ರಿಕ್ ಬಸ್ ಈ ಹಿಂದೆ ಕಂಪನಿಗಳಿಂದ ಬೇಡಿಕೆ ಬಂದ್ರೆ ವೋಲ್ವೋ ಬಸ್ ನೀಡಲಾಗ್ತಿತ್ತು. ಆದ್ರೆ ಇನ್ಮುಂದೆ ಕಂಪನಿಗಳಿಗೆ ಎಲೆಕ್ಟ್ರಿಕ್ ಬಸ್ ನೀಡಲು ತೀರ್ಮಾನಿಸಲಾಗಿದ್ದು, ಈ ಬಸ್‌ಗಳನ್ನ ಏನೂ ಮಾಡೋಕೆ ಸಾಧ್ಯವಾಗ್ತಿಲ್ಲ ಎಂದು ಶ್ರೀರಾಮುಲು ಅಸಹಾಯಕತೆಯಿಂದ ನುಡಿದಿದ್ದು, ಈ ಹಿನ್ನಲೆ ಶೀಘ್ರದಲ್ಲಿ ಬೆಂಗಳೂರು ವೋಲ್ವೋ ಬಸ್‌ ಮುಕ್ತವಾಗೋದು ಗ್ಯಾರೆಂಟಿ

RELATED ARTICLES
- Advertisment -
Google search engine

Most Popular

Recent Comments