Friday, September 12, 2025
HomeUncategorizedವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸುಳ್ಳು ಸೂಕ್ತವಲ್ಲ : ಸಿಟಿ ರವಿ

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸುಳ್ಳು ಸೂಕ್ತವಲ್ಲ : ಸಿಟಿ ರವಿ

ರಾಯಚೂರು : ಸಿದ್ದರಾಮಯ್ಯ ವಕೀಲರಿದ್ದೋರು,ವಕೀಲರಿಗೆ ಅದು ಸೂಕ್ತ ಇರಬಹುದು ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಸುಳ್ಳು ಸೂಕ್ತವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಕೀಲರಿದ್ದೋರು,ವಕೀಲರಿಗೆ ಅದು ಸೂಕ್ತ ಇರಬಹುದು. ಆದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸುಳ್ಳು ಸೂಕ್ತವಲ್ಲ. ಗಾಂಧಿನ RSS ಅವ್ರು ಕೊಂದ್ರು ಅಂತಾರೆ. ಆಗ ಕಾಂಗ್ರೆಸ್ ಸರ್ಕಾರವಿತ್ತು. ನೆಹರು ಪ್ರಧಾನಿಯಾಗಿದ್ರು. ಆದ್ರೆ ಅವರಾಗ್ಲಿ,ಇಲ್ಲ ಕೋರ್ಟ್ ಆಗ್ಲಿ ಆ ಬಗ್ಗೆ ಹೇಳಲೇ ಇಲ್ಲ ಎಂದರು.

ಮೂರು ಆಯೋಗದ ಗಾಂಧಿ ಹತ್ಯೆಗೂ, RSSಗೂ ಸಂಬಂಧವಿಲ್ಲ ಅಂದ್ರು. ಆದ್ರೆ ಸಿದ್ದರಾಮಯ್ಯ ಏನ್ ಹೇಳ್ತಾರೆ. RSSನವರೇ ಹತ್ಯೆ ಮಾಡಿದಾರೆ ಅಂತಾರೆ. ಹೀಗಾಗಿ ಅವರು ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಆಗ ಬಿಜೆಪಿಯ ಒಬ್ಬ ಎಂಪಿಯೂ ಇರ್ಲಿಲ್ಲ. ಅವರೇ ಹೇಳ್ತಾರಲ್ಲ, ಸ್ವತಂತ್ರ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿ ಇರ್ಲಿಲ್ಲ ಅಂತಾರೆ. ಹಾಗಿದ್ರೆ RSSನ ಯಾಕೆ ಬಿಟ್ರಿ. ಈ ಬಗ್ಗೆ ಸಿದ್ದರಾಮಯ್ಯ, ಅವರ ನಾಯಕರನ್ನು ಕೇಳಿ. ಇಲ್ಲ ಸುಳ್ಳು ಹೇಳೊದನ್ನ ಬಿಡ್ಲಿ ಎಂದು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments