Wednesday, September 10, 2025
HomeUncategorizedಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮತ್ತೆ ವಿಸ್ತರಣೆ: ಡಿಸಿ ಆದೇಶ

ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮತ್ತೆ ವಿಸ್ತರಣೆ: ಡಿಸಿ ಆದೇಶ

ಶಿವಮೊಗ್ಗ: ಎರಡು ಕೋಮಿನ ನಡುವೆ ನಡೆದ ಗಲಾಟೆಯಲ್ಲಿ ಚೂರಿ ಇರಿತವಾಗಿದ್ದರಿಂದ ಶಿವಮೊಗ್ಗ ನಗರ ಸೇರಿದಂತೆ ಭದ್ರವಾತಿಯಲ್ಲಿ ಕಳೆದ ಕೆಲವುದ ದಿನಗಳಿಂದ ನಿಷೇಧಾಜ್ಞೆಗೆ ಆದೇಶಿಸಿತ್ತು. ಈಗ ನಿಷೇಧಾಜ್ಞೆ ಆದೇಶವನ್ನ ಮತ್ತೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಇನ್ನೂ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ವಿಸ್ತರಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 6 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈಗ ಆಗಸ್ಟ್​ 23 ರ ಬೆಳಿಗ್ಗೆ 6 ರವರೆಗೆ ಅವಧಿಯಲ್ಲಿ ರಾತ್ರಿ 10 ರೊಳಗೆ ಅಂಗಡಿಗಳನ್ನು ಮುಚ್ಚಬೇಕು. ರಾತ್ರಿ 10 ರ ನಂತರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸುವಂತಿಲ್ಲ. ಬೈಕ್ ಹಿಂಬದಿ ಸವಾರ ನಿಯಮ ಸಡಿಲಿಕೆ ಎಂದು ನಿಷೇಧಾಜ್ಞೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments