ಕಾರವಾರ : ಭಾರತದಲ್ಲಿ ಇದುವರೆಗೆ 74 ಪ್ರಭೇಧದ ಏಡಿಗಳು ಪತ್ತೆಯಾಗಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ವಲಯದಲ್ಲಿ ಸಿಹಿ ನೀರಿನಲ್ಲೊಂದು ಹೊಸ ಪ್ರಭೇದದ ಏಡಿಯೊಂದು ಪತ್ತೆಯಾಗಿದೆ.
ಈ ಏಡಿ ಕಳೆದ ಒಂದು ವರ್ಷದ ಹಿಂದೆ ಪತ್ತೆಯಾಗಿದ್ದಾರೂ. ಯಾವ ಪ್ರವೇಧಕ್ಕೆ ಸೇರಿದ್ದು ಎನ್ನುವ ಬಗ್ಗೆ ವರ್ಷಗಳಿಂದ ಜುಯಾಲೋಜಿಕಲ್ ಸರ್ವೆ ಆಪ್ ಇಂಡಿಯಾ ಇದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಈಗ ಇದರ ಪ್ರಭೇದವನ್ನ ಪತ್ತೆ ಹಚ್ಚಿದ್ದು, ಇದು ಗಟಿಯಾದ ದ್ವಿವರ್ಣ ಎಂದು ಮಾನ್ಯತೆ ಪಡೆದಿದೆ.
ಭಾರತದಲ್ಲಿ ಇದುವರೆಗೆ ವಿವಿಧ ಬಗೆಯ 74 ಏಡಿ ಪ್ರಬೇಧ ಏಡಿಗಳು ಪತ್ತೆಯಾಗಿದ್ದು, ಈಗ ಮಾನ್ಯತೆ ಪಡೆದ ಗಟಿಯಾನ ದ್ವಿವರ್ಣ ಮಾನ್ಯತೆ ಪಡೆದ ಏಡಿ ಸೇರಿ 75 ಪ್ರಭೇಧದಾಗಿದರ. ಇದನ್ನ ನೋಡಿ ಇಲ್ಲಿನ ಜನರು ಆಶ್ಚರ್ಯಕ್ಕೆ ಒಳಗಾಗಿದ್ದು, ಜೀವ ವೈವಿದ್ಯತೆಯಲ್ಲಿ ಪಶ್ಚಿಮ ಘಟ್ಟ ನಿಗೂಢತೆಯನ್ನ ಕಾಯ್ದುಕೊಂಡಿದೆ. ಪರಶುರಾಮ ಭಜಂತ್ರಿ ಹಾಗೂ ಗೋಪಾಲ ಹೆಗಡೆ ಎಂಬುವವರಿಗೆ ಈ ಏಡಿ ಸಿಕ್ಕಿದ್ದು, ಬಳಿಕ ಇದನ್ನ ಸರ್ವೇ ಗೆ ಒಪ್ಪಿಸಲಾಗಿದೆ.
ಉದಯ ಬರ್ಗಿ ಪವರ್ ಟಿವಿ ಕಾರವಾರ