Wednesday, August 27, 2025
Google search engine
HomeUncategorizedಪ್ರಿಯಾಂಕ್ ಖರ್ಗೆ ಅಕ್ಕ ತಂಗಿಯರು ಮಂಚ ಹತ್ತಿಯೆ ನೌಕರಿಗೆ ಹೋಗಿದ್ದಾರಾ..? ಶಾಸಕ ಪಾಟೀಲ್ ಗರಂ

ಪ್ರಿಯಾಂಕ್ ಖರ್ಗೆ ಅಕ್ಕ ತಂಗಿಯರು ಮಂಚ ಹತ್ತಿಯೆ ನೌಕರಿಗೆ ಹೋಗಿದ್ದಾರಾ..? ಶಾಸಕ ಪಾಟೀಲ್ ಗರಂ

ಕಲಬುರಗಿ : ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಮನೆಯಲ್ಲೂ ಅಕ್ಕ- ತಂಗಿಯರು ಮಂಚ ಹತ್ತಿ ನೌಕರಿಗೆ ಹೋಗಿದ್ದಾರಾ..? ಎಂದು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

ಕಲಬುರಗಿ ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಲಂಚ- ಮಂಚದ ಸರ್ಕಾರ ಹೇಳಿಕೆ ವಿಚಾರವನ್ನು ತೀವ್ರವಾಗಿ ಖಂಡಿಸಿದ ಅವರು, ಶಾಸಕ ಖರ್ಗೆ ಅವರಿಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವುದಿಲ್ಲ. ಲಂಚದ ಬಗ್ಗೆ ಮಾತನಾಡುತ್ತಾರೆ ಸರಿ, ಆದರೆ ಮಂಚದ ಬಗ್ಗೆ ಮಾತನಾಡಿ ರಾಜ್ಯದ ಮಹಿಳೆಯರ ಗೌರವ ತೆಗೆಯುವುದು ಸರಿಯಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಅವರು ಸಹ ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರು ಅವರ ಮನೆಯಲ್ಲೂ ಸಹ ಅಕ್ಕ- ತಂಗಿಯರು ಇದ್ದಾರೆ ಅವರು ಕೂಡ ಮಂಚ ಹತ್ತಿ ನೌಕರಿಗೆ ಹೋಗಿದ್ದಾರಾ ?. ಮಾತಾಡಬೇಕಾದ್ರೆ ನಾಲಿಗೆ ಮೇಲೆ ಹಿಡಿತ ಇರಲೀ. ಮಂಚ ಹತ್ತಿ ನೌಕರಿಗೆ ಹೋಗಿರುವ ಒಂದೇ ಒಂದು ಉದಾಹರಣೆ ಕೊಡಲಿ. ಬಾಯಿಮಾತಿಗೆ ಏನೇನು ಮಾತನಾಡಿದರೆ ಸರಿ ಇರೋದಿಲ್ಲ. ಈ ಹೇಳಿಕೆ ಯಿಂದ ಮಹಿಳೆಯರಿಗೆ ಪ್ರಿಯಾಂಕ್ ಅಗೌರವ ತೋರಿದ್ದಾರೆ. ಈ ರೀತಿಯ ಹೇಳಿಕೆ ಕುಟುಂಬಗಳಲ್ಲಿ ಬಿರುಕು ಮೂಡಿಸುತ್ತವೆ. ಇಂತಹ ನೀಚ ಮಾತು ಹೇಳೋದು ಅವರಿಗೆ ಗೌರವತರಲ್ಲ. ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಿ ಎಂದು ಗುಡುಗಿದರು.

ಪ್ರಿಯಾಂಕ್ ಖರ್ಗೆ ಅವರು, ಪ್ರಚಾರದ ಗೀಳಿಗಾಗಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆ. ಅವರು ಈಗಲೇ ರಾಜ್ಯದ ಮಹಿಳೆಯ ಕ್ಷಮೆ ಕೇಳಲಿ. ಸರ್ಕಾರದ ಬಗ್ಗೆ ಮಾತಾಡಲು ಅವರ ಬಳಿ ಏನು ಉಳಿದಿಲ್ಲ. ಅದಕ್ಕಾಗಿ ಈ ರೀತಿ ಕೀಳು ಮಟ್ಟದ ಹೇಳಿಕೆ ಕೊಡ್ತಿದ್ದಾರೆ ಎಂದು ಆರೋಪಿಸಿದರು.

ಅನಿಲ್‌ಸ್ವಾಮಿ, ಕಲಬುರಗಿ

RELATED ARTICLES
- Advertisment -
Google search engine

Most Popular

Recent Comments