Wednesday, August 27, 2025
HomeUncategorizedಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಸಲ್ಮಾನ್ ಖಾನ್.!

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಸಲ್ಮಾನ್ ಖಾನ್.!

ಮುಂಬೈ: ಬಾಲಿವುಡ್ ನಟ ಸಲ್ಮಾನ್​ ಖಾನ್ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಈ ಕುರಿತು ಸಲ್ಮಾನ್ ಖಾನ್ ಭಾರತೀಯ ಧ್ವಜದೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಎಲ್ಲರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ‘ಜೈ ಹಿಂದ್’ ಎಂದು ಅವರು ಬರೆದಿದ್ದಾರೆ. ಸಲ್ಮಾನ್​ ಖಾನ್ ಭಾರತೀಯ ನೌಕಾಪಡೆಯ ಅಧಿಕಾರಿಗಳೊಂದಿಗೆ ಪೋಸ್ ನೀಡಿ ಕೈಯಲ್ಲಿ ಭಾರತೀಯ ಧ್ವಜವನ್ನು ಬೀಸುತ್ತಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ, ಸಲ್ಮಾನ್ ವಿಶಾಖಪಟ್ಟಣಂನಲ್ಲಿರುವ ನಾವಿಕರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಿಡುವು ಪಡೆದುಕೊಂಡಿದ್ದರು. ಸಲ್ಮಾನ್ ಭಾರತೀಯ ನೌಕಾಪಡೆಗೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2014 ರಲ್ಲಿ, ಸಲ್ಮಾನ್ ಗೋವಾದಲ್ಲಿ ನೌಕಾಪಡೆಯ ಅಧಿಕಾರಿಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಕಳೆದಿದ್ದರು.

 

 

RELATED ARTICLES
- Advertisment -
Google search engine

Most Popular

Recent Comments