Saturday, September 13, 2025
HomeUncategorizedಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು

ಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು

ವಿಜಯಪುರ: ರಾಜ್ಯದಲ್ಲಿ ಮಾತ್ರವಲ್ಲದೇ ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕರ್ನಾಟಕದ ಭೀಮಾ ನದಿ ತುಂಬಿ ಹರಿಯುತ್ತಿದೆ.‌

ಸೊಲ್ಲಾಪುರ ಜಿಲ್ಲೆಯ ಉಜನಿ ಜಲಾಶಯದಿಂದ ಭೀಮಾ ನದಿಗೆ 50 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದ್ದು, ಇದರಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇರಿದಂತೆ ನಾನಾ ಬ್ಯಾರೇಜ್​ಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಜನರು ಹಾಗೂ ಜಾನುವಾರುಗಳು ಉಮರಾಣಿ ಸೇತುವೆ ಮೇಲೆ ಸಂಚರಿಸದಂತೆ ಡಂಗೂರದ ಮೂಲಕ ಎಚ್ಚರದಿಂದ ಇರುವಂತೆ ತಿಳಿಸಲಾಗ್ತಿದೆ.

ಉಮರಾಣಿ ಸೇತುವೆ, ಹಿಂಗಣಿ ಬ್ರಿಡ್ಜ್, ತಾವರಖೇಡ ಗ್ರಾಮ ಸೇರಿದಂತೆ ಭೀಮಾ ತೀರಕ್ಕೆ ಇಂಡಿ ಉಪವಿಭಾಗಾಧಿಕಾರಿ, ಇಂಡಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ನೋಡಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ನದಿ ತೀರದ ಗ್ರಾಮದ ಜನತೆಯೊಂದಿಗೆ ಚರ್ಚಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳುವಳಿಕೆ ಮೂಡಿಸಿದರು.

RELATED ARTICLES
- Advertisment -
Google search engine

Most Popular

Recent Comments