Saturday, September 13, 2025
HomeUncategorizedಸ್ವಾತಂತ್ರ್ಯೋತ್ಸವಕ್ಕೆ ಕೌಂಟ್‌ಡೌನ್ ಶುರು..!

ಸ್ವಾತಂತ್ರ್ಯೋತ್ಸವಕ್ಕೆ ಕೌಂಟ್‌ಡೌನ್ ಶುರು..!

ಬೆಂಗಳೂರು : ಸ್ವಾತಂತ್ರ್ಯ ಬಂದು ಇದೀಗ 75 ವರ್ಷಕ್ಕೆ ನಾವೆಲ್ಲಾ ಕಾಲಿಡ್ತಿದ್ದೇವೆ. ಸ್ವಾತಂತ್ರ್ಯದ ಸಿಹಿಗಳಿಗೆಯನ್ನು ಸ್ವಾಗತಿಸೋ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಅದಕ್ಕಾಗಿ ಇದೀಗ ಕ್ವೀನ್ಸ್ ರಸ್ತೆಯಲ್ಲಿರುವ ಮಾಣೆಕ್ ಷಾ ಮೈದಾನ ಅಕ್ಷರಶಃ ಮದುವಣಗಿತ್ತಿಯಾಗಿ ಸಿಂಗಾರಗೊಂಡಿದೆ. ಶಾಮಿಯಾನ, ವೇದಿಕೆ ನಿರ್ಮಾಣ, ಬ್ರಾಸ್ನಂತಹ ಅಲಂಕಾರಿಕ ವಸ್ತುಗಳನ್ನು ಕೂಡ ಮೈದಾನದಲ್ಲಿ ಇಡಲಾಗಿದೆ. ಆಗಸ್ಟ್ 15ರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 8:55ಕ್ಕೆ ಮೈದಾನಕ್ಕೆ ಆಗಮಿಸಲಿದ್ದಾರೆ. ಶಾರ್ಪ್ 9 ಗಂಟೆಗೆ ಧ್ವಜಾರೋಹಣವನ್ನು ಮುಖ್ಯಮಂತ್ರಿ ನೆರವೇರಿಸ್ತಾರೆ. ನಂತರ ತೆರೆದ ಜೀಪ್‌ನಲ್ಲಿ ಪರೇಡ್ ಹಾಗೂ ಗೌರವ ಸ್ವೀಕಾರವನ್ನು ಪಡೆಯಲಿದ್ದಾರೆ. ಈ ವೇಳೆ ಗೌರವ ಸೂಚಿಸಲು ಕೆ.ಎಸ್ ಆರ್ ಪಿ,ಸಿಎಆರ್,ಟ್ರಾಫಿಕ್ ವಾರ್ಡನ್,ಡಾಗ್ ಸ್ಕ್ವಾಡ್ ಸೇರಿ 36 ತುಕಡಿಗಳಲ್ಲಿ 1200 ಮಂದಿ ಕವಾಯತಿನಲ್ಲಿ ಭಾಗಿಯಾಗಲಿದ್ದಾರೆ.

ನಾಡಗೀತೆ,ಈಸೂರು ಹೋರಾಟ, ಟೆಂಟ್ ಪೆಗ್ಗಿಂಗ್,ದೇಹದಾಢ್ಯ ಪ್ರದರ್ಶನ, ಕೊಂಬ್ಯಾಕ್ಟ್ ಫ್ರೀ ಫಾಲ್ ನಂತಹ ಕಣ್ಮನ ತಣಿಸುವ ಕಾರ್ಯಕ್ರಮಗಳು ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮವನ್ನು ಪಾಲಿಗೆ ನಿರ್ವಹಣೆಯಲ್ಲೇ ನಡೆಯಲಿದ್ದು, ಇನ್ನು ಬಂದೋಬಸ್ತ್ ವಿಚಾರಕ್ಕೆ ಬರೋದಾದ್ರೆ 9 ಡಿಸಿಪಿ,15 ಎಸಿಪಿ, 44 ಇನ್ಸ್‌ಪೆಕ್ಟರ್ ಸೇರಿದಂತೆ ಸಿಎಆರ್,ಕೆಎಸ್ ಆರ್.ಪಿ, ಅರೆಸೇನಾಪಡೆಯ 1000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಪರ್ಸ್ ಹಾಗೂ ವ್ಯಾನಿಟಿ ಬ್ಯಾಗನ್ನು ಬಿಟ್ಟು ಯಾರೊಬ್ಬ ಸಾರ್ವಜನಿಕನೂ ಮೈದಾನದ ಒಳಗೆ ಬೇರೆ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.

ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ಪೂರ್ವಭಾವಿ ಸಿದ್ದತೆಯನ್ನು ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಶಿಸ್ತುಬದ್ಧವಾಗಿ ಮಾಡಿಕೊಂಡಿದೆ.

RELATED ARTICLES
- Advertisment -
Google search engine

Most Popular

Recent Comments