Sunday, August 31, 2025
HomeUncategorizedನೆಲದ ಋಣ ಮರೆಯದ ಟಿಬೆಟಿಯನ್ನರು, ತಿರಂಗ ಹಾರಾಟ-ಭಾರತಾಂಬೆಗೆ ಜೈಕಾರ.!

ನೆಲದ ಋಣ ಮರೆಯದ ಟಿಬೆಟಿಯನ್ನರು, ತಿರಂಗ ಹಾರಾಟ-ಭಾರತಾಂಬೆಗೆ ಜೈಕಾರ.!

ಚಾಮರಾಜನಗರ: ಭಾರತದಲ್ಲಿ ಆಶ್ರಯ ಪಡೆದ ಟಿಬೆಟಿಯನ್ನರು ತಾವಿರುವ ನೆಲದ ಋಣ‌ ಮರೆಯದೇ ದೇಶಾಭಿಮಾನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಒಡೆಯರಪಾಳ್ಯ ಸಮೀಪದ ಟಿಬೆಟಿಯನ್ ಕ್ಯಾಂಪಿನಲ್ಲಿ ನಡೆದಿದೆ. ‌

ದೇಶ ಬಿಟ್ಟು ಭಾರತದಲ್ಲಿ‌ಆಶ್ರಯ ಪಡೆದಿರುವ ಟಿಬೆಟಿಯನ್ನರು ಇಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಿ ಬಾವುಟ ಹಿಡಿದು ಬೈಕ್ ರ್ಯಾಲಿ‌ ನಡೆಸಿದ್ದಾರೆ. ಜೊತೆಗೆ, ಸೆಟಲ್ ಮೆಂಟ್ ಗಳಲ್ಲಿರುವ ಬೌದ್ಧ ಮಂದಿರದ ಮುಂಭಾಗ ತಿರಂಗ ಹಾರಿಸಿ ರಾಷ್ಟ್ರಗೀತೆ ಹಾಡುವ ಮೂಲಕ ತಮಗೆ ನೆಲೆ ಕೊಟ್ಟ ಭಾರತಾಂಬೆಗೆ ಜೈಕಾರ ಹಾಕಿದ್ದಾರೆ.

ಒಡೆಯರ ಪಾಳ್ಯದ ಟಿಬೆಟಿಯನ್ ಸೆಟಲ್ ಮೆಂಟ್ ಆಫೀಸರ್ ಗೀಕ್ ಜುಂಗ್ನೆ, ಮಿಡಲ್ ವೇ ಟಿಬೆಟಿಯನ್ ಯೂಥ್ ಕಾಂಗ್ರೆಸ್ ಕೊಳ್ಳೇಗಾಲ ಅಧ್ಯಕ್ಷ ಸೆರಿಂಗ್ ಡಾರ್ಜಿ ಹಾಗೂ ಚುಂಗ್ ಎಂಬವರ ನೇತೃತ್ವದಲ್ಲಿ ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿ ಗಮನ ಸೆಳೆದಿದ್ದಾರೆ.‌

ಇವರು ಭಾರತೀಯರಲ್ಲ ಆದರೆ ಭಾರತದ ಮೇಲಿನ ಅಭಿಮಾನ ಮರೆಯದೇ ತಿರಂಗ ಹಾರಿಸಿ, ದೇಶದ ಹಬ್ಬವೊಂದರಲ್ಲಿ ಭಾಗಿಯಾಗಿದ್ದು ಮಾದರಿಯಾಗಿದೆ.

RELATED ARTICLES
- Advertisment -
Google search engine

Most Popular

Recent Comments