Saturday, August 23, 2025
Google search engine
HomeUncategorizedಗದಗ ಜಿಲ್ಲೆಗೆ ಬಾರದಂತೆ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ

ಗದಗ ಜಿಲ್ಲೆಗೆ ಬಾರದಂತೆ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ

ಗದಗ : ಶ್ರೀರಾಮಸೇನೆ ಕಾರ್ಯಕರ್ತನಿಂದ ಚಾಕು ಇರಿತ ಪ್ರಕರಣ ಸಂಬಂಧಿಸಿ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್​​​ ಗದಗ ಜಿಲ್ಲೆ ಆಗಮಿಸದಂತೆ ನಿರ್ಬಂಧಿಸಲಾಗಿದೆ.

ಮಲ್ಲಸಮುದ್ರ ಗ್ರಾಮದಲ್ಲಿ ಇಬ್ಬರ ಮೇಲೆ ಚೂರಿ ಇರಿತ ಪ್ರಕರಣ ಸಂಬಂಧ ಇಂದು ಗದಗ ನಗರಕ್ಕೆ ಮುತಾಲಿಕ್ ಭೇಟಿ ಹಿನ್ನೆಲೆ ಗದಗ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​​ಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತ ಗದಗ ಜಿಲ್ಲಾ ಪ್ರವೇಶ ನಿರ್ಬಂಧಿಸಿದ್ದು, ಎರಡು ದಿನ ಪ್ರವೇಶ ನಿರ್ಬಂಧಿಸಲಾಗಿದೆ.ಸಿ ವೈಶಾಲಿ ಆದೇಶ ಹೊರಡಿಸಿದ್ದಾರೆ.

ಇನ್ನು, ಆಗಸ್ಟ್ 9ರಂದು ಮಲ್ಲಸಮುದ್ರದಲ್ಲಿ ನಡೆದಿದ್ದ ಗಲಾಟೆ, ಶ್ರೀರಾಮಸೇನೆ ಕಾರ್ಯಕರ್ತನಿಂದ ಚಾಕು ಇರಿತ ಪ್ರಕರಣದ ಹಿನ್ನೆಲೆ ಸೋಮು ಗುಡಿ‌ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲಸಮುದ್ರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಅನ್ನೋ ಹಿನ್ನೆಲೆಯಲ್ಲಿ ನಿರ್ಬಂಧ ಹಾಕಲಾಗಿದೆ. ನಾಳೆ ಮಧ್ಯರಾತ್ರಿ 12ಗಂಟೆವರೆಗೆ ನಿರ್ಬಂಧಿಸಿ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments