Sunday, August 24, 2025
Google search engine
HomeUncategorized3 ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆ್ಯಸಿಡ್​ ದಾಳಿಗೊಳಗಾದ ಯುವತಿ.!

3 ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆ್ಯಸಿಡ್​ ದಾಳಿಗೊಳಗಾದ ಯುವತಿ.!

ಬೆಂಗಳೂರು: ಕಳೆದ ಮೂರು ತಿಂಗಳ ಹಿಂದೆ ಇಲ್ಲಿನ ಹೆಗ್ಗನಹಳ್ಳಿ ಯುವತಿ ಮೇಲೆ ಆಸಿಡ್ ದಾಳಿ ಇಡೀ ಬೆಂಗಳೂರಿಗರನ್ನ ಬೆಚ್ಚಿಬಿಳಿಸಿತ್ತು. ಈಗ ಈ ಯುವತಿ ಸಾವು ಜಯಿಸಿ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾಳೆ.

ಕಳೆದ ಏಪ್ರೀಲ್ 28 ರಂದು ಕಿರಾತಕ ಯುವತಿಯ ಮೇಲೆ ಆರೋಪಿ ನಾಗೇಶ್ ಆ್ಯಸಿಡ್ ಹಾಕಿದ್ದ, 106 ದಿನಗಳ ನಂತರ ಸತತ ವೈದ್ಯರ ಪ್ರಯತ್ನದಿಂದ ಆಸ್ಪತ್ರೆಯಿಂದ ಯುವತಿ ಮನೆಗೆ ಬಂದಿದ್ದಾಳೆ.

ತನ್ನ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಆರೋಪಿ ನಾಗೇಶನಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಮುಂದೆಯೇ ಆರೋಪಿಗೂ ಆ್ಯಸಿಡ್ ಹಾಕಬೇಕು, ನಂತ್ರ ನೇಣಿಗೆ ಹಾಕಬೇಕು. ಅವನೂ ನನ್ನಂತೆ ನರಳೋದನ್ನ ನೋಡಬೇಕು ಎಂದಿದ್ದಾಳೆ. ಅದಕ್ಕಾಗಿಯೇ ನಾನು ಇಷ್ಟು ಬೇಗ ಗುಣಮುಖಳಾಗಿ ಮನೆಗೆ ಮರಳಿದ್ದೇನೆ ಎಂದಿದ್ದಾಳೆ.

ಈವರೆಗೂ ಯುವತಿಗೆ 28 ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, 3 ತಿಂಗಳ ನಂತರ ಮತ್ತೆ ಕೆಲವು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಕಣ್ಣಿಗೂ ಸ್ವಲ್ಪ ಗಾಯವಾಗಿದ್ದು, ದೃಷ್ಟಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲವಂತೆ ಎಂದು ಯುವತಿ ಹೇಳಿದ್ದಾಳೆ. ಈ ವೇಳೆ ತನಗೆ ಧೈರ್ಯ ತುಂಬಿ ಚಿಕಿತ್ಸೆ ಕೊಟ್ಟ ವೈದ್ಯರಿಗೆ ಹಾಗೂ ಪೊಲೀಸ್​ರಿಗೆ ಧನ್ಯವಾದ ತಿಳಿಸಿದಳು.

RELATED ARTICLES
- Advertisment -
Google search engine

Most Popular

Recent Comments