Thursday, August 28, 2025
HomeUncategorizedಭೋರ್ಗರೆಯುತ್ತಿದೆ ಭರಚುಕ್ಕಿ : ಅಂಗೈಯಲ್ಲೇ ನೋಡಿ ಜಲಪಾತದ ಜಲಸಿರಿ

ಭೋರ್ಗರೆಯುತ್ತಿದೆ ಭರಚುಕ್ಕಿ : ಅಂಗೈಯಲ್ಲೇ ನೋಡಿ ಜಲಪಾತದ ಜಲಸಿರಿ

ಚಾಮರಾಜನಗರ : ಕಾವೇರಿ ಹೊರಹರಿವು ಹೆಚ್ಚಾದ ಪರಿಣಾಮ ಚಾಮರಾಜನಗರ ಜಿಲ್ಲೆ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು ಜಲಸಿರಿ ಚೆಲುವು ಎಷ್ಟು ನೋಡಿದರೂ ಸಾಲದು ಎಂಬ ವಾತಾವರಣ ನಿರ್ಮಾಣವಾಗಿದೆ.

ನಗರದ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ ಇದೀಗ ನೋಡಗರ ಮನಸೋರಗೊಳ್ಳುತ್ತಿದೆ. ಕಾವೇರಿಯ ಹೊರ ಹರಿವು ಹೆಚ್ಚಾಗುತ್ತಿದ್ದಂತೆ ತನ್ನ ರಭಸವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಸಾಮಾನ್ಯವಾಗಿ ಕಾವೇರಿ ಜಲನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಕೆಆರ್ ಎಸ್ ಕಬಿನಿಯಿಂದ ಜಲಾಶಯಗಳಿಂದ ಹೆಚ್ಚು ನೀರು ಹೊರ ಬಿಟ್ಟಾಗ ಭರಚುಕ್ಕಿ ಹಾಗು ಹೊಗೆನಕಲ್ ಜಲಪಾತಗಳ ಮೈದಂಬಿ ಹರಿಯುವುದು ಸರ್ವಸಾಮಾನ್ಯ.

ಆದರೆ ಇದೀಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಉತ್ತಮವಾದ ಮಳೆಯಾಗುತ್ತಿರುವುದರಿಂದ ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳ ಸುತ್ತ ಮುತ್ತ ಹಚ್ಚಹಸಿರಿನಿಂದ ಕಾಡು ಕಂಗೊಳಿಸುತ್ತಿದ್ದು, ಅದರ ನಡುವೆ ಹಾಲ್ನೋರೆಯಂತೆ ಹರಿದು ಜಲಪಾತಗಳ ಮೂಲಕ ದುಮ್ಮುಕ್ಕಿ ತನ್ನ ರೌದ್ರ ನರ್ತನದ ಮೂಲಕ ಪ್ರಕೃತಿ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಇನ್ನು ವಿಕೇಂಡ್ ನಂತೆ ಸೋಮವಾರ, ಮಂಗಳವಾರವು ಸಾವಿರಾರು ಪ್ರವಾಸಿಗರು ಲಗ್ಗೆಯಿಟ್ಟು ಹಾಲ್ನೊರೆಯಂತ ಜಲವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ‌.

RELATED ARTICLES
- Advertisment -
Google search engine

Most Popular

Recent Comments