Wednesday, September 10, 2025
HomeUncategorizedಪತ್ನಿ ಕುತ್ತಿಗೆ ಸೀಳಿ ಹತ್ಯೆಗೈದ ಪಾಪಿ ಪತಿ

ಪತ್ನಿ ಕುತ್ತಿಗೆ ಸೀಳಿ ಹತ್ಯೆಗೈದ ಪಾಪಿ ಪತಿ

ಹಾಸನ : ಜೀವನಾಂಶ ಕೇಳಿದ್ದ ಪತ್ನಿ ಕುತ್ತಿಗೆ ಸೀಳಿ ಪತಿಯೇ ಹತ್ಯೆಗೈದ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ.

ನಗರದಲ್ಲಿ ಕೊಲೆಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಊರೂರು ತಿರುಗುತ್ತಿದ್ದ ಹಂತಕ ಪತಿ ಜಗದೀಶ್ ಸೆರೆಯಾಗಿದ್ದು, ಜುಲೈ 20 ರ ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಲೆಯಾಗಿರೊ ವಿಚಾರ ಬೆಳಕಿಗೆ ಬಂದಿದೆ. ಮಧ್ಯಾಹ್ನ ಊಟಕ್ಕೆಂದು ತಾನೇ ಪತ್ನಿಯನ್ನು ಕರೆತಂದು ಮನೆಯಲ್ಲಿ ಇರಿದು ಕೊಂದು ಪಾಪಿ ಪತಿ ಎಸ್ಕೇಪ್ ಆಗಿದ್ದಾನೆ.

ಇನ್ನು, ಕೊಲೆ ನಡೆದ ಹತ್ತು ದಿನಗಳ ಬಳಿಕ ಆರೋಪಿ ಸೆರೆ ಹಿಡಿದ ಪೊಲೀಸರು, 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದರು. ಪತಿಯ ಕಿರುಕುಳದಿಂದ ಬೇಸತ್ತು ವಿಚ್ಚೇದನಕ್ಕೆ ಅರ್ಜಿ ಹಾಕಿ ಜೀವನಾಂಶ ಕೇಳಿದ್ದ ಪತ್ನಿ ಜೀವನಾಂಶ ಕೊಡಲಾಗದೆ ಆಕೆಯ ಮನವೊಲಿಸಲು ಯತ್ನಿಸಿ ಒಪ್ಪದಿದ್ದಾಗ ಕೊಲೆ ಮಾಡಿದ್ದಾನೆ.

ಅದಲ್ಲದೇ, ಕೊಲೆಗೂ ಮುನ್ನ ಚಿಕನ್ ಶಾಪ್ ಹಾಗು ಮೀನಿನ ಅಂಗಡಿಯಲ್ಲಿ ಚಾಕ್ ನಿಂದ ದೇಹ ಕತ್ತರಿಸೋ ಬಗ್ಗೆ ರಿಹರ್ಸಲ್ ನಡೆಸಿದ್ದ ಪಾಪಿ, ಕಡೆಗೆ ಅಲ್ಲಿಂದಲೇ ಕದ್ದು ತಂದಿದ್ದ ಚಾಕುವಿನಿಂದ ಪತ್ನಿಯನ್ನ ಇರಿದು ಹತ್ಯೆ ಮಾಡಿದ್ದಾನೆ.

RELATED ARTICLES
- Advertisment -
Google search engine

Most Popular

Recent Comments