Monday, September 8, 2025
HomeUncategorizedಆಫ್ರಿಕಾ ಖಂಡದಿಂದ ಬಂದ ವಿದೇಶಿಗನಿಗೆ ಮಂಕಿಪಾಕ್ಸ್ ಇಲ್ಲ : ಡಾ ಕೆ ಸುಧಾಕರ್

ಆಫ್ರಿಕಾ ಖಂಡದಿಂದ ಬಂದ ವಿದೇಶಿಗನಿಗೆ ಮಂಕಿಪಾಕ್ಸ್ ಇಲ್ಲ : ಡಾ ಕೆ ಸುಧಾಕರ್

ಬೆಂಗಳೂರು : ಆಫ್ರಿಕಾ ಖಂಡದಿಂದ ಬಂದ ವಿದೇಶಿಗನಿಗೆ ಮಂಕಿಪಾಕ್ಸ್ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಸ್ಪಷ್ಟ ಪಡಿಸಿದ್ದಾರೆ.

ಟ್ವೀಟ್ ಮಾಡಿದ ಖಚಿತ ಪಡಿಸಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಆಫ್ರಿಕಾ ಖಂಡಾದ ವ್ಯಕ್ತಿ ಬೆಂಗಳೂರಿಗೆ ಆಗಮಿಸಿದ ವಿದೇಶಿಗ, 55 ವರ್ಷದ ಎಥೋಪಿಯಾ ಪ್ರಜೆ, ಮಂಕಿಪಾಕ್ಸ್ ಗುಣಲಕ್ಷಣ ಕಂಡುಬಂದಿದ್ದವು. ಈ ಹಿನ್ನೆಲೆ ಐಸೋಕೇಟ್ ಮಾಡಿ ಟೆಸ್ಟ್ ಮಾಡಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಚಿಕನ್ ಪಾಕ್ಸ್ ಎಂದು ಪತ್ತೆಯಾಗಿದೆ.

ಇನ್ನು, ಮಂಕಿಪಾಕ್ಸ್ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನಚ್ಚರಿಕಾ ಕ್ರಮವಾಗಿ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ. ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡುಬಂದವರಿಗೆ ಐಸೋಲೇಟ್ ಗೆ ಸೂಚನೆ ನೀಡಿದ್ದು, ಚರ್ಮ ತೊಂದರೆ, ಕೆಮ್ಮು, ನೆಗಡಿ, ತುರಿಕೆ, ಕಫ, ಜ್ವರ ಬಂದವರಿಗೆ ಪರಿಕ್ಷೆಗೊಳಿಪಡಿಸಲು ಸೂಚನೆ ನೀಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments