Monday, September 8, 2025
HomeUncategorizedಹಲವೆಡೆ ವರುಣಾರ್ಭಟ: ಮುಂದಿನ 2 ಗಂಟೆಗಳ ಕಾಲ ಭಾರೀ ಮಳೆ; ಹವಾಮಾನ ಇಲಾಖೆ ಸೂಚನೆ

ಹಲವೆಡೆ ವರುಣಾರ್ಭಟ: ಮುಂದಿನ 2 ಗಂಟೆಗಳ ಕಾಲ ಭಾರೀ ಮಳೆ; ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್​​ ಸಿಟಿ ಸೇರಿದಂತೆ ಕೋರಮಂಗಲ, ಟೌನ್​ಹಾಲ್, ಮೆಜೆಸ್ಟಿಕ್ ವ್ಯಾಪ್ತಿಯಲ್ಲಿ ಶನಿವಾರ ಸಂಜೆಯಿಂದ ಆರಂಭವಾಗಿರುವ ಮಳೆ ಬಿರುಸಿನಿಂದ ಸುರಿಯುತ್ತಿದೆ.

ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಸಂಜೆ ವೇಳೆಗೆ ದಟ್ಟೈಸಿದ ಮೋಡಗಳು, ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಸಿದವು.

ಶಾಂತಿನಗರ ಸೇರಿ ಹಲವೆಡೆ ಭಾರಿ ಮಳೆ ಉಂಟಾಗಿದ್ದು, ಕೆಲಸ ಮುಗಿಸಿ ಮನೆಯತ್ತ ಹೋಗುತ್ತಿರುವವರ ಪರದಾಟ ಜಾಸ್ತಿಯಾಗಿದೆ. ಇನ್ನು ರಸ್ತೆ ಮೇಲೆ ಮಳೆ ನೀರು ಉಕ್ಕಿ ಹರಿಯಿತು. ತಗ್ಗು ಪ್ರದೇಶ ಜಲಾವೃತವಾಗಿತ್ತು, ವಾಹನ ಸಂಚಾರ ಸ್ಥಗಿತವಾಗಿದೆ. ವಾಹನಗಳು ಸುತ್ತಿ ಬಳಸಿ ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದಿಢೀರ್‌ ಬಂದ ಮಳೆಗೆ ಸಿಲಿಕಾನ್‌ ಸಿಟಿ ಜನಜೀವನ ಅಸ್ತವ್ಯಸ್ತವಾಗಿದ್ದು, ಬಹುತೇಕ ಭಾಗದಲ್ಲಿ ಕರೆಂಟ್ ಕಟ್ ಆಗಿದೆ.

ಇನ್ನೂ 2 ಗಂಟೆಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಎಲ್ಲೆಲ್ಲಿ ಮಳೆ : ರಾಜರಾಜೇಶ್ವರಿನಗರ, ದೀಪಾಂಜಲಿನಗರ, ವಿಜಯನಗರರಾಜಾಜಿನಗರ, ಯಶವಂತಪುರ, ಬಾಗಲಗುಂಟೆ, ಪೀಣ್ಯ, ವಿದ್ಯಾರಣ್ಯಪುರ, ಜಾಲಹಳ್ಳಿ, ಗೊರಗುಂಟೆಪಾಳ್ಯ, ಲಗ್ಗೆರೆ, ಕೋರಮಂಗಲ, ಮಡಿವಾಳ, ಎಂ.ಜಿ.ರಸ್ತೆ, ಶಿವಾಜಿನಗರ, ಅಶೋಕನಗರ, ಮಡಿವಾಳ ಹಾಗೂ ಹಲವೆಡೆ ಮಳೆಯಾಗುತ್ತಿದೆ.

ಅಷ್ಡೇಅಲ್ಲದೇ ರಾಜ್ಯದ ಎಲ್ಲಾ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನಾಳೆ ಕರಾವಳಿಯ 3 ಜಿಲ್ಲೆಗಳು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆಯಿರುವುದರಿಂದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments