Thursday, August 28, 2025
HomeUncategorizedರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ : ಸಿದ್ದರಾಮಯ್ಯ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ : ಸಿದ್ದರಾಮಯ್ಯ

ಬೆಂಗಳೂರು : ಇಂಟಲಿಜೆನ್ಸ್ ಮತ್ತು ಪೊಲೀಸ್ ಇಲಾಖೆ ಎರಡು ಇವರ ಕೈ ಕೆಳಗೆ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮತ್ತೊಂದು ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದಿಂದ ಯಾರ ರಕ್ಷಣೆ ಮಾಡಲು ಆಗುತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಸರ್ಕಾರ ಯಾವುದೇ ಕಠಿಣ ಕ್ರಮ ತೆಗೆದುಕೊಳ್ತಿಲ್ಲ. ಇದರ ಹೊಣೆ ಸಿಎಂ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳಬೇಕು. ಇಂಟಲಿಜೆನ್ಸ್ ಮತ್ತು ಪೊಲೀಸ್ ಇಲಾಖೆ ಎರಡು ಇವರ ಕೈ ಕೆಳಗೆ ಬರುತ್ತದೆ. ಆರಗ ಮಂತ್ರಿಯಾಗಿ ಮುಂದುವರೆಯಲು ನೈತಿಕತೆ ಇಲ್ಲ ಎಂದರು.

ಅದಲ್ಲದೇ, ಇವರೆಲ್ಲ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು. ಎಲ್ಲರು ಆತಂಕದಿಂದ ಬದುಕುವಂತಾಗಿದೆ. ಬಸವರಾಜ್ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಕೂಡಲೇ ಅಪರಾಧಿ ಪತ್ತೆ ಹಚ್ಚಬೇಕು. ಪ್ರವೀಣ್ ಕೊಲೆ ಆಗಲಿ, ಫಾಜಿಲ್ ಕೊಲೆ ಮಾಡಿರೋವ್ರು ಯಾರೇ ಆಗಲಿ ಯಾರೇ ಇರಲಿ ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಜನ ಇವರ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments