Saturday, August 23, 2025
Google search engine
HomeUncategorizedಕಳಂಕಿತ ಪಾರ್ಥ ಚಟರ್ಜಿ ಸಂಪುಟದಿಂದ ವಜಾ

ಕಳಂಕಿತ ಪಾರ್ಥ ಚಟರ್ಜಿ ಸಂಪುಟದಿಂದ ವಜಾ

ಪಶ್ಚಿಮ ಬಂಗಾಳ : SSC ಹಗರಣದಲ್ಲಿ ಬಂಧಿತರಾಗಿರುವ ಕಳಂಕಿತ ಪಾರ್ಥ ಚಟರ್ಜಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟದಿಂದ ವಜಾ ಮಾಡಿದ್ದಾರೆ.

TMC ಯ ಪ್ರಧಾನ ಕಾರ್ಯದರ್ಶಿ ಚಟರ್ಜಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಸಂಸದೀಯ ವ್ಯವಹಾರಗಳು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಖಾತೆಗಳನ್ನು ಹೊಂದಿದ್ದರು. ಸಂಪುಟದಿಂದ ಚಟರ್ಜಿ ಅವರನ್ನು ವಜಾ ಮಾಡಿದ ಬಳಿಕ ಅವರ ಖಾತೆಯನ್ನು ಸಿಎಂ ಸ್ವತಃ ನೋಡಿಕೊಳ್ಳಲಿದ್ದಾರೆ.

ಪಾರ್ಥ ಚಟರ್ಜಿ ಅವರ ಹಗರಣ ಬಯಲಾಗುತ್ತಿದ್ದಂತೆ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂಬ ಮಾತು ಪಕ್ಷದೊಳಗೆ ಕೇಳಿ ಬಂದಿತ್ತು. ಹೀಗಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಲು ದೀದಿ ವಜಾ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗ್ತಿದೆ. ಚಟರ್ಜಿ ಅವರನ್ನು ವಜಾಗೊಳಿಸಿದ ನಂತರ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ, ನಾನು ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದೇನೆ. ನನ್ನ ಪಕ್ಷವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಅದರ ಹಿಂದೆ ಹಲವು ಯೋಜನೆಗಳಿವೆ ಆದರೆ ನಾನು ವಿವರಗಳಿಗೆ ಹೋಗಲು ಬಯಸುವುದಿಲ್ಲ ಎಂದಿದ್ದಾರೆ. ಈ ಹಿಂದೆ ಯಾರಾದರೂ ತಪ್ಪಿತಸ್ಥರು ಎಂದು ಕಂಡುಬಂದರೆ, ಅವರು ಸಚಿವರಾಗಿದ್ದರೂ ಆ ವ್ಯಕ್ತಿಯನ್ನು ಬಿಡುವುದಿಲ್ಲ ಎಂದು ಹೇಳಿದ್ದರು.

RELATED ARTICLES
- Advertisment -
Google search engine

Most Popular

Recent Comments