Tuesday, September 2, 2025
HomeUncategorizedಹುಲಿ ನರಹಂತಕ ಆಗುವುದೇಕೆ?: ಘರ್ಜಿಸುವ ವ್ಯಾಘ್ರನಿಗೂ ಇದೇ ಸವಾಲು-ಸರಹದ್ದು!

ಹುಲಿ ನರಹಂತಕ ಆಗುವುದೇಕೆ?: ಘರ್ಜಿಸುವ ವ್ಯಾಘ್ರನಿಗೂ ಇದೇ ಸವಾಲು-ಸರಹದ್ದು!

ಚಾಮರಾಜನಗರ: ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಮತ್ತು ಹುಲಿಗಳ ಸಂಖ್ಯೆಯನ್ನು ಉಳಿಸಿ ಬೆಳೆಸಲು ಈ ವರ್ಷ ಭಾರತ ‘ಪ್ರಾಜೆಕ್ಟ್ ಟೈಗರ್’ ಅನ್ನು ಕೈಗೆತ್ತಿಕೊಂಡಿದೆ. ಹುಲಿ ನರಭಕ್ಷಕವಾಗಿ ಏಕೆ ಬದಲಾಗುತ್ತದೆ..? ಹುಲಿ ಸಂತತಿಯ ಮಹತ್ವ. ಅದಕ್ಕಿರುವ ಸವಾಲುಗಳು ಇದೆಲ್ಲೆದರ ಕುರಿತ ಮಾಹಿತಿ ನಿಲ್ಲಿದೆ.

ಒಂದು ಕಾಡು ಸಮೃದ್ಧಿಯಿಂದ ಇರಲು ಹುಲಿರಾಯನ ಸಂತತಿ ಇದ್ದರೆ‌‌ ಸಾಕು. ಆದರೆ, ಪರಿಸರ ನಾಶ, ಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಸಲಾಗುವ ಕೆಲವೊಂದು ಕಾರ್ಯಗಳಿಂದ ಹುಲಿ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ. ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ.

ಇನ್ನು, ಕಾಡಿನಲ್ಲಿ ತನ್ನದೇ ಸರಹದ್ದನ್ನು ಹೊಂದಿರುವ ಹುಲಿರಾಯ ಮನುಷ್ಯನನ್ನು ತಿಂದು ಜೀವಿಸುವ ನಿರ್ಣಯಕ್ಕೆ ಬರುವುದೇಕೆ, ವ್ಯಾಘ್ರನಿಗೆ ಮಾನವನೇ ಯಾವಾಗ ಟಾರ್ಗೆಟ್ ಆಗ್ತಾನೆ ಎಂಬ ಪ್ರಶ್ನೆ ಕಾಡುವುದು ಸಹಜ. ಹುಲಿ ಬಲಿಷ್ಠ ಪ್ರಾಣಿಯಾದರೂ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಗೋಜಿಗೆ ಹೋಗಲ್ಲ. ಒಂದು ವೇಳೆ ದಾಳಿ ಮಾಡಲು ಬಂದಿದ್ದಾರೆ ಎಂದು ಕೊಂಡು ಪ್ರತಿದಾಳಿ ನಡೆಸಿದಾಗಲೂ ತಿನ್ನದೇ ಕೇವಲ ಸಾಯಿಸಿ ಪರಾರಿಯಾಗುತ್ತದೆ. ಆದರೆ ಒಂದು ವೇಳೆ ತಿಂದರೆ ಮುಂದಾಗೋದು ಅನಾಹುತವೇ.

ದಾಳಿ ಮಾಡಿದ ಬಳಿಕ ಒಂದು ವೇಳೆ ತಿಂದರೆ ಮನುಷ್ಯರನ್ನು ತನ್ನದೇ ಬೇಟೆ ಎಂದು ಭಾವಿಸಲಿದೆಯಂತೆ. ಮಾನವ ತನಗಿಂತ ಬಲಿಷ್ಟನಲ್ಲ, ಆತನೂ ಕೂಡ ತನ್ನ ಬಲಿ ಎಂದು ಭಾವಿಸಿ ಬೇಟೆಯಾಡಲು ಪ್ರಾರಂಭಿಸುತ್ತದೆ. ಬಹಿರ್ದೆಸೆ ವೇಳೆ, ಜಮೀನಿನಲ್ಲಿ ಕುಳಿತು ಕೆಲಸ ಮಾಡುವ ವೇಳೆ ಮನುಷ್ಯಾಕೃತಿ ಚಿಕ್ಕದಾಗಿ ಕಾಣುವುದರಿಂದ ಪ್ರಾಣಿಯೆಂದು ಭಾವಿಸಿ ಬೇಟೆಯಾಡುತ್ತದೆ. ಒಂದು ವೇಳೆ ಇದೇ ಮುಂದುವರಿದರೆ ನರಹಂತಕನಾಗಲಿದೆ ಎನ್ನುತ್ತಾರೆ ತಜ್ಞರು.

ಇನ್ನು, ಯಾವಾಗ ಹುಲಿ ನರಭಕ್ಷಕವಾಗುತ್ತದೆ ಎಂದರೆ ಸಾಮಾನ್ಯವಾಗಿ ಹುಲಿ ಶಕ್ತಿ ಕಳೆದುಕೊಂಡಾಗ, ಗಾಯಗೊಂಡಾಗ, ವಯಸ್ಸಾಗಿ ಪ್ರಾಣಿಗಳನ್ನು ಹಿಡಿಯಲು ವಿಫಲವಾದಾಗ, ಸರಹದ್ದಿನ ಕದನದಲ್ಲಿ ಬೇರೊಂದು ಹುಲಿಯಿಂದ ಬೇರ್ಪಟ್ಟು ಆಹಾರ ಸಿಗದೇ ಇರುವ ಪರಿಸ್ಥಿತಿ ಎದುರಾದಾಗ ಮನುಷ್ಯ, ಕುರಿಯಂತಹ ಸಾಫ್ಟ್ ಟಾರ್ಗೆಟ್​​ಗಳನ್ನು ಬೇಟೆಯಾಡುವ ನಿರ್ಧಾರ ಮಾಡುತ್ತದೆ.

ಒಟ್ಟಿನಲ್ಲಿ ಹುಲಿ ಸಂತತಿ ಉಳಿಯಬೇಕೆಂದರೆ ಅದಕ್ಕೆ ಬೇಕಾದ ಇತರೆ ಪ್ರಾಣಿಗಳೂ ಇರಬೇಕು. ಸಸ್ಯಹಾರಿ ಪ್ರಾಣಿಗಳು ಇರಬೇಕೆಂದರೆ ಹಸಿರು, ನೀರು ಇರಲೇಬೇಕು, ಹಸಿರು-ನೀರು ಇದ್ದರೇ ಕಾಡು ಸಮೃದ್ಧ. ಹೀಗಾಗಿ ಈ ಆಹಾರ ಸರಪಳಿಯಲ್ಲಿ ಹುಲಿ ಸುಸ್ಥಿರ ಪರಿಸರದ ಸಂಕೇತವಾಗಿದೆ.

ಶ್ರೀನಿವಾಸ್​ ನಾಯಕ್​. ಚಾಮರಾಜನಗರ. ಪವರ್​ ಟಿವಿ.

RELATED ARTICLES
- Advertisment -
Google search engine

Most Popular

Recent Comments