Sunday, September 7, 2025
HomeUncategorizedಸುಳ್ಯ ಪೇಟೆ ಉದ್ವಿಗ್ನ ಪರಿಸ್ಧಿತಿ : 144 ಸೆಕ್ಷನ್ ಜಾರಿ

ಸುಳ್ಯ ಪೇಟೆ ಉದ್ವಿಗ್ನ ಪರಿಸ್ಧಿತಿ : 144 ಸೆಕ್ಷನ್ ಜಾರಿ

ಮಂಗಳೂರು : ಯುವ ಬೆಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮಂಗಳವಾರ ರಾತ್ರಿ ಭೀಕರವಾಗಿ ಕೊಲೆಯಾದ ಹಿನ್ನೆಲೆಯಲ್ಲಿ ಬೆಳ್ಳಾರೆ. ಪುತ್ತೂರು, ಸುಳ್ಯ ಮತ್ತು ಕಡಬ ಮೊದಲಾದ ಊರುಗಳಲ್ಲಿ ಸ್ವಯಂಘೋಷಿತ ಬಂದ್ ಆಚರಿಸಲಾಗುತ್ತಿದೆ.

ಸದರಿ ಊರುಗಳಲ್ಲಿ ಅಂಗಡಿ ಮುಂಗಟ್ಟು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ರಸ್ತೆಗಳ ಮೇಲೆ ಅತಿವಿರಳ ಸಂಖ್ಯೆಯಲ್ಲಿ ಜನ ತಿರುಗಾಡುತ್ತಿದ್ದಾರೆ.ಸುಳ್ಯ ಪೇಟೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಗುಂಪು ಸೇರಿ ರಸ್ತೆಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವೆಡೆ ಬಸ್​ಗಳ ಮೇಲೆ ಕಲ್ಲು ತೂರಾಟ ನೆಡೆಸಲಾಗಿದೆ. ಬೆಳ್ಳಾರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್​​ ಮಾಡಲಅಗಿದ್ದು, ಪುತ್ತೂರು ಉಪವಿಭಾಗದಲ್ಲಿ 144 ಸೆಕ್ಷನ್ ಜಾರಿಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments