Saturday, August 23, 2025
Google search engine
HomeUncategorizedಬಿಎಸ್​​ವೈ ರಾಜಕೀಯ ನಿವೃತ್ತಿ ಇಲ್ಲ, ಕೆಲಸ ಮಾಡೋಣ ಎಂದು ಹೇಳಿದ್ದಾರೆ: ಸಿಎಂ ಬೊಮ್ಮಾಯಿ

ಬಿಎಸ್​​ವೈ ರಾಜಕೀಯ ನಿವೃತ್ತಿ ಇಲ್ಲ, ಕೆಲಸ ಮಾಡೋಣ ಎಂದು ಹೇಳಿದ್ದಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದರು.

ಯಡಿಯೂರಪ್ಪನವರು ರಾಜಕೀಯ ನಿವೃತ್ತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಭೇಟಿ ಬಳಿಕ ಸುದ್ದಿಗರರೊಂದಿಗೆ ಮಾತನಾಡಿದ ಅವರು, ನಿನ್ನೆ ಅವರು ನೀಡಿದ್ದು ಸಲಹೆ ಅಷ್ಟೇ. ಕ್ಷೇತ್ರದ ಜನ ಪದೆ ಪದೇ ಹೇಳ್ತಾ ಇದ್ದರು. ಹಾಗಾಗಿ ಅವರು ನಿನ್ನೆ ಆ ಹೇಳಿಕೆ ನೀಡಿದ್ದಾರೆ.

ಅಷ್ಟೆಅಲ್ಲದೇ ವಿಜಯೇಂದ್ರ ಬಗ್ಗೆ ಮಾತ್ರವಲ್ಲ. ಇಡೀ ರಾಜ್ಯದ ಬಗ್ಗೆ ಮೋದಿ ಅಮಿತ್ ಶಾ ತೀರ್ಮಾನ ಮಾಡ್ತಾರೆ. ಬಿಎಸ್​​ವೈ ಅಂದ್ರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಕಗಳಿಂದ ಇದ್ದಾರೆ. ಅವರ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ. ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ. ಇನ್ನು ಈಗ ಸೃಷ್ಟಿ ಮಾಡ್ತಾರಾ? ಅವರು ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳ್ತಾರೆ. ಆ ಕ್ಷಣ ಕ್ಷೇತ್ರದ ಜನರ ಒತ್ತಾಯಕ್ಕೆ ಅವರು ಹಾಗೇ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸದರು.

ಇನ್ನು ನಿನ್ನೆ ನಮ್ಮ ನಾಯಕರು ಶಿಕಾರಿಪುರದಲ್ಲಿ ಮಾತನಾಡಿದ್ದರು. ಆ ಬಗ್ಗೆ ಚರ್ಚೆ ಮಾಡಿದ್ದೇವು. ಅಲ್ಲಿನ ಜನರು ಚರ್ಚೆ ಮಾಡುವಾಗ ಯಡಿಯೂರಪ್ಪನವರು ಮಾತನಾಡಿದ್ದಾರೆ ಅಷ್ಟೇ. ಯಾವುದೇ ರಾಜಕೀಯ ನಿವೃತ್ತಿ ಇಲ್ಲ. ನುಗ್ಗಿ ಕೆಲಸ ಮಾಡೋಣ ಅಂತ ಹೇಳಿದ್ದಾರೆ. ನಾಳೆಯಿಂದಲೇ ಪ್ರವಾಸ ಹಾಕಿ ಎಂದು ಹೇಳಿದರು. ಕರ್ನಾಟಕ ರಾಜಕಾರಣದಲ್ಲಿ ಯಡಿಯೂರಪ್ಪನವರು ಶಕ್ತಿಯಿದ್ದ ಹಾಗೇ. ಕರ್ನಾಟಕದಲ್ಲಿ ಜನಪ್ರಿಯ ನಾಯಕರು ಅಂದ್ರೆ ಅವರೇ. ಜನರ ಜೊತೆ ಇದ್ದು ಜನರಿಂದಲೇ ನಾಯಕರಾದವರು ಎಂದರು.

ಜುಲೈ 28 ರಂದು ನಡೆಯುವ ಒಂದು ವರ್ಷದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳಲಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆಯಲಿದ್ದಾರೆ. ಅಂತಿಮವಾಗಿ ವರಿಷ್ಟರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments