Thursday, September 11, 2025
HomeUncategorizedಪತಿಯ ಪರಸಂಗಕ್ಕೆ ಪತ್ನಿ ಬಲಿ

ಪತಿಯ ಪರಸಂಗಕ್ಕೆ ಪತ್ನಿ ಬಲಿ

ಹಾಸನ : ಜೀವನಾಂಶ ಕೊಡಬೇಕಾಗುತ್ತದೆ ಅಂತಾ ಪಾಪಿಪತಿ ಪತ್ನಿಯನ್ನೇ ಮುಗಿಸಿದ್ದಾನೆ. ಮಕ್ಕಳನ್ನು ಶಾಲೆಗೆ ಕಳಿಸಿ ಬೀಭತ್ಸವಾಗಿ ಮಡದಿಯ ಕುತ್ತಿಗೆ ಸೀಳಿ ಕಿರಾತಕ ಪರಾರಿಯಾಗಿದ್ದಾನೆ. ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ಈ ಅಮಾನುಷ ಘಟನೆ ನಡೆದಿದೆ. 37 ವರ್ಷದ ಅಶ್ವಿನಿ ಕೊಲೆಯಾದ ನತದೃಷ್ಟೆ. ಈಕೆ 17 ವರ್ಷಗಳ ಹಿಂದೆಯೇ ಜಗದೀಶ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ರು.ಆದ್ರೆ, ಇವರಿಬ್ಬರ ನಡುವೆ ಪರಸ್ತ್ರಿ ಪ್ರವೇಶಿಸಿದ್ದಳು. ಪರಿಣಾಮ ಆಗಾಗ ಗಲಾಟೆ ಆಗ್ತಿತ್ತು.ಇದರಿಂದ ಬೇಸತ್ತಿದ್ದ ಅಶ್ವಿನಿ 2 ವರ್ಷಗಳ ಹಿಂದೆ ಗಂಡನಿಂದ ದೂರವಾಗಿ ಕೋರ್ಟ್‌ ಮೆಟ್ಟಿಲೇರಿ ತಿಂಗಳಿಗೆ 15 ಸಾವಿರ ಜೀವನಾಂಶ ಪಡೆಯುತ್ತಿದ್ದಳು. ಆದ್ರೆ, ಹಣ ಕೊಡೋಕೆ ಹಿಂದೇಟು ಹಾಕಿದ್ದ ಪಾಪಿ ಮಡದಿಯನ್ನೇ ಮುಗಿಸೋ ಪ್ಲ್ಯಾನ್ ಮಾಡಿ ಮರಳಿ ಒಂದಾಗಿ ಬಾಳುವ ನಾಟಕವಾಡಿದ್ದ.

ಪದೇ ಪದೇ ಜೀವನಾಂಶ ಕೇಸ್ ವಾಪಸ್ ತಗೋ ಎಂದು ಜಗದೀಶ್ ಪತ್ನಿಯ ಬೆನ್ನು ಬಿದ್ದಿದ್ದ. ಆದ್ರೆ, ಇದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನೇ ಮುಗಿಸೋಕೆ ಪ್ಲ್ಯಾನ್ ಮಾಡಿದ್ದ.ಅದರಂತೆ, ಮಕ್ಕಳನ್ನು ತಾನೇ ಶಾಲೆಗೆ ಬಿಟ್ಟು ಬಂದು, ಕತ್ತು ಕೊಯ್ದು ಪತ್ನಿಯ ಕತ್ತು ಕೊಯ್ದಿದ್ದಾನೆ.ಬಳಿಕ ಹೊರಗಿಂದ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ. ಮಕ್ಕಳು ಶಾಲೆಯಿಂದ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾಸನ ಎಸ್‌ಪಿ ಹರಿರಾಂ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಒಟ್ನಲ್ಲಿ ಪ್ರೀತಿಸಿ ಮದುವೆಯಾದವಳೊಂದಿಗೆ ಸುಮಾರು ಒಂದುವರೆ ದಶಕ ಕಳೆದರೂ ಆಕೆಗೆ ಕೈಕೊಟ್ಟು ಮತ್ತೊಬ್ಬಳ ಮೋಹಕ್ಕೆ ಬಿದ್ದ ನೀಚ ಧರ್ಮಪತ್ನಿಯನ್ನೇ ಮುಗಿಸಿ ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡಿದ್ದು ಮಾತ್ರ ವಿಪರ್ಯಾಸ.

ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ.

RELATED ARTICLES
- Advertisment -
Google search engine

Most Popular

Recent Comments