Wednesday, September 3, 2025
HomeUncategorizedರಮೇಶ್ ಕುಮಾರ್ ಬೆಂಬಲಕ್ಕೆ ನಿಂತ ಕಾಂಗ್ರೆಸ್​​

ರಮೇಶ್ ಕುಮಾರ್ ಬೆಂಬಲಕ್ಕೆ ನಿಂತ ಕಾಂಗ್ರೆಸ್​​

ಬೆಂಗಳೂರು: ಬಿಜೆಪಿಯವರಿಗೆ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು! ಎಂಬಂತೆ ಮಾತುಗಳನ್ನು ತಿರುಚುವುದು ಅವರ ಹುಟ್ಟುಗುಣ ಎಂದು ಕಾಂಗ್ರೆಸ್​​ ವಾಗ್ದಾಳಿ ನಡೆಸಿದ್ದಾರೆ.

ಗಾಂಧಿ ಕುಟುಂಬದ ಆಸ್ತಿ ವಿಚಾರ ಪ್ರಸ್ತಾಪಿಸಿ ಪೇಚಿಗೆ ಸಿಲುಕಿರುವ ಮಾಜಿ ಸ್ಪೀಕರ್ ಕೆ.ಆರ್‌. ರಮೇಶ್‌ ಕುಮಾರ್‌ ಅವರಿಗೆ ಕಾಂಗ್ರೆಸ್ ನಾಯಕರು ಟ್ವಿಟ್​​ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ನಿನ್ನೆ( ಗುರುವಾರ)ಸುದ್ದಿಗಾರರೊಂದಿಗೆ ಮಾತನಾಡುವಾಗ ರಮೇಶ್‌ ಕುಮಾರ್‌ ಅವರು, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರು ಇ.ಡಿ. ವಿಚಾರಣೆಗೆ ಒಳಗಾಗಿರುವ ಹಿನ್ನೆಲೆ ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಅವರ ಬೆಂಬಲಕ್ಕೆ ನಿಂತು, ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ’ ಎಂದು ಹೇಳಿದ್ದರು.
ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಕಾಂಗ್ರೆಸ್​ ನಾಯಕರಗಳ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯವರಿಗೆ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು! ಎಂಬಂತೆ ಮಾತುಗಳನ್ನು ತಿರುಚುವುದು ಅವರ ಹುಟ್ಟುಗುಣ. ಅಲ್ಲದೇ ರಮೇಶ್ ಕುಮಾರ್‌ರವರು ಹೇಳಿದಂತೆ ನೆಹರು ಕುಟುಂಬ ದೇಶಕ್ಕಾಗಿ, ವೈಜ್ಞಾನಿಕ ಮನೋಭಾವದ ಶಿಕ್ಷಣ, ಆರ್ಥಿಕ ಸಮಾನತೆಯ ನೀತಿಗಳು, ಸಮಾಜದಲ್ಲಿ ಸ್ವಾಭಿಮಾನದ ಬದುಕಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ, ಬಿಜೆಪಿಯ ಕೊಡುಗೆ ಶೇಕಡ 40 ರಷ್ಟು ಕಮೀಷನ್ ಲೂಟಿ ಮಾತ್ರ’ ಎಂದು ಕಾಂಗ್ರೆಸ್ ತಿರುಗೇಟು ನೀಡುವ ಪ್ರಯತ್ನ ಮಾಡಿದೆ.

RELATED ARTICLES
- Advertisment -
Google search engine

Most Popular

Recent Comments