Wednesday, September 10, 2025
HomeUncategorizedಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ : ಕೆ.ಎಸ್​ ಈಶ್ವರಪ್ಪ

ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ : ಕೆ.ಎಸ್​ ಈಶ್ವರಪ್ಪ

ಮೈಸೂರು: ತಾನು ಸಿಎಂ ಆಗಲು ತನ್ನ ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಡಿ.ಕೆ.ಶಿ ಜಾತಿವಾದಿ ಆಗಿದ್ದಾರೆ ಎಂದು ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ.

ಮೂರು ತಲೆಮಾರಿಗೆ ಆಗುವಷ್ಟು ಹಣ ಸಂಪಾದಿಸಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಕುಮಾರ್ ಹೇಳಿಕೆ ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ನಮ್ಮ ಸರ್ಕಾರ ಮೇಲೆ 40% ಲಂಚದ ಆರೋಪ ಮಾಡುತ್ತದೆ.

ನಮ್ಮ ಸರ್ಕಾರದ ಯಾವ ಸಚಿವರು ಮೇಲೂ ಒಂದೇ ಒಂದು ಲಂಚದ ನಿರ್ಧಿಷ್ಟ ಪ್ರಕರಣ ಇಲ್ಲ ಎಂದರು.
ಇನ್ನು, 40% ಆರೋಪ ಮಾಡುವ ಕಾಂಗ್ರೆಸ್ ಒಂದೇ ಒಂದು ಕೇಸ್ ಎತ್ತಿ ತೋರಿಸಲಿ. ಯಾರೋ ಹೇಳಿದ ಹೇಳಿಕೆ ಇಡಿದುಕೊಂಡು ಆರೋಪ ಮಾಡುವುದು ಸರಿಯಲ್ಲ. ಮೈಸೂರಿನಲ್ಲಿ ಮಾಜಿ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಇಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ತಾನು ಸಿಎಂ ಆಗಲು ತನ್ನ ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಡಿ.ಕೆ.ಶಿ ಜಾತಿವಾದಿ ಆಗಿದ್ದಾರೆ ಎಂದು ಹೇಳಿದರು.

ಅದಲ್ಲದೇ, ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಸಹ ಜಾತಿವಾದಿಯಾಗಿದ್ದಾರೆ‌. ಇವರಿಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿಯ ಕೆಸರು ಅಂಟಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಈ ವಿಚಾರದಲ್ಲಿನ ಹೇಳಿಕೆಗಳಿಗೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಬ್ಬರು ಮಾತ್ರ ಕಾಂಗ್ರೆಸ್ ಗೌರವ ತರುವ ಮಾತನಾಡಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular

Recent Comments