Friday, September 12, 2025
HomeUncategorizedಸಿದ್ದರಾಮಯ್ಯಗೆ ಟೋಪಿ ಹಾಕುತ್ತಿದ್ದಾರೆ: ವರ್ತೂರು ಪ್ರಕಾಶ್‌

ಸಿದ್ದರಾಮಯ್ಯಗೆ ಟೋಪಿ ಹಾಕುತ್ತಿದ್ದಾರೆ: ವರ್ತೂರು ಪ್ರಕಾಶ್‌

ಕೋಲಾರ: ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕರೆದು, ಸಿದ್ದರಾಮಯ್ಯ ಅವರಿಗೆ ಕೆಲವರು ಟೋಪಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವರ್ತೂರು ಪ್ರಕಾಶ್‌ ಹೇಳಿದರು.

ನಗರದಲ್ಲಿಂದು ಆಯೋಜಿಸಿದ್ದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜಕ್ಕೆ ಅವಮಾನವಾಗಬಾರದೆಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳುತ್ತಿದ್ದೇನೆ. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕರೆದು, ಅವರಿಗೆ ಕೆಲವರು ಟೋಪಿ ಹಾಕುತ್ತಿದ್ದಾರೆ ಕ್ಷೇತ್ರದ ಯಾವ ಊರಲ್ಲೂ ಕಾಂಗ್ರೆಸ್‌ ಇಲ್ಲ. ಈ ಗುಟ್ಟನ್ನು ಹೇಳಬಾರದಿತ್ತು. ಆದರೆ, ಅವರು ನಮ್ಮವರೆಂಬ ಕಾರಣಕ್ಕೆ ಹೇಳುತ್ತಿದ್ದೇನೆ ಎಂದರು.

ಅಲ್ಲದೇ ಅವರನ್ನು ಸೋಲಿಸಲೆಂದೇ, ಹಾಳು ಮಾಡಲೆಂದು ಅವರನ್ನು ಇಲ್ಲಿಗೆ ಕರೆ ತರಲು ಸಂಚು ಹಾಕುತ್ತಿದ್ದಾರೆ. ಮುಸ್ಲಿಂ ಹೊರತುಪಡಿಸಿ ಕ್ಷೇತ್ರದ 220 ಹಳ್ಳಿಯಲ್ಲಿ ಪ್ರತಿ ಮತದಾರ ನನಗೆ ಗೊತ್ತು ಎಂದು ತಿಳಿಸಿದರು.

ಇನ್ನು ಹೀಗಿದ್ದೂ ಸ್ಪರ್ಧೆ ಮಾಡಲು ಇಲ್ಲಿಗೆ ಬಂದರೆ ಎದುರಿಸಲು ನಾನು ಸಿದ್ಧ. ಮಿಸ್ಟರ್‌ ರಮೇಶ್‌ ಕುಮಾರ್‌, ನೀವು ಕೋಲಾರ ಕ್ಷೇತ್ರದಲ್ಲಿ ಐದು ಸಾವಿರ ಜನರನ್ನು ಸೇರಿಸಿದರೆ ನಾನು ಸನ್ಯಾಸಿ ಆಗಿಬಿಡುತ್ತೇನೆ. ಕೋಲಾರಮ್ಮ ದೇಗುಲದಲ್ಲಿ ಸೇವೆ ಮಾಡಿಕೊಂಡಿರುತ್ತೇನೆ ಎಂದು ಸವಾಲು ಹಾಕಿದರು

RELATED ARTICLES
- Advertisment -
Google search engine

Most Popular

Recent Comments