Tuesday, September 9, 2025
HomeUncategorizedಕೊಳ್ಳೇಗಾಲದಲ್ಲಿ ಹಳಸಿದ ಬಿರಿಯಾನಿ ತಿಂದು 24 ಜನ ಅಸ್ವಸ್ಥ

ಕೊಳ್ಳೇಗಾಲದಲ್ಲಿ ಹಳಸಿದ ಬಿರಿಯಾನಿ ತಿಂದು 24 ಜನ ಅಸ್ವಸ್ಥ

ಚಾಮರಾಜನಗರ : ಹುಟ್ಟು ಹಬ್ಬದ ತಂಗಳು ಬಿರಿಯಾನಿ ತಿಂದು 24 ಜನ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಅರೇಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಂತೋಷ್ ಕುಮಾರ್ ಎಂಬುವವರ ಮನೆಯಲ್ಲಿ ನಿನ್ನೆ ಅವರ ಪುತ್ರನ ಹುಟ್ಟುಹಬ್ಬ ಕಾರ್ಯಕ್ರಮ ನೆರವೇರಿತ್ತು.

ಈ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಭರ್ಜರಿ ಬಿರಿಯಾನಿ ಊಟ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಉಳಿದ ಬಿರಿಯಾನಿಯನ್ನು ಸಂತೋಷ್ ಕುಮಾರ್ ತಮ್ಮ ತೊಟದ ಕೂಲಿ ಕಾಮಿಕರಿಗೆ ಕೊಟ್ಟಿದ್ದರು. ಆದರೆ, ನಂತರ ತಂಗಳು ಅಥವಾ ಹಳಸಿದ ಬಿರಿಯಾನಿಯನ್ನು ಸೇವಿಸಿದ ಕೂಲಿಯಾಳುಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಂಗಳು ಬಿರಿಯಾನಿ ಸೇವಿಸಿದ ಸುಮಾರು 24 ಕೂಲಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.

ಹಳಸಿದ ಬಿರಿಯಾನಿ ಸೇವಿಸಿದ ಪುಟ್ಟ ಲಕ್ಷಮ್ಮ.ಮೇಘನಾ. ಲಾವಣ್ಯ.ಕಮಲ. ಯಶವಂತ್. ಸೇರಿದಂತೆ ಎಲ್ಲಾ 24 ಜನರನ್ನು ಹತ್ತಿರದ ಅಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ ಶಾಸಕ ಎನ್.ಮಹೇಶ್, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ರು

RELATED ARTICLES
- Advertisment -
Google search engine

Most Popular

Recent Comments