Thursday, September 18, 2025
HomeUncategorizedಸಿದ್ದು ಆಪ್ತರ ಮುಂದೆನೇ ಡಿ ಕೆ ಸುರೇಶ್​ ಟಾಂಗ್​​

ಸಿದ್ದು ಆಪ್ತರ ಮುಂದೆನೇ ಡಿ ಕೆ ಸುರೇಶ್​ ಟಾಂಗ್​​

ಬೆಂಗಳೂರು : ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವ ಸಮಿತಿ ಸಭೆ. ಅಮೃತ ಮಹೋತ್ಸವ ಸಮಿತಿಯಿಂದ ಮೊದಲ ಸಭೆ. ವೇದಿಕೆ ಮೇಲೆ ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್​ ಟಾಂಗ್​​. ನಮಗೆ ಇಷ್ಟ ಇದೆಯೋ ಇಲ್ವೋ ಸಿದ್ದರಾಮೋತ್ಸವ ಅಂತಿದ್ದಾರೆ. ಅಮೃತ ಮಹೋತ್ಸವ ಸಮಿತಿ ಇದನ್ನು ಅಲ್ಲಗೆಳೆಯಬಾರದು. ನೀವು ಇದನ್ನ ಸಿದ್ದರಾಮೋತ್ಸವ ಎಂಬುದನ್ನ ಒಪ್ಪಿಕೊಳ್ಳಬೇಕು. ಜೊತೆಗೆ ಸ್ವಾತಂತ್ರ್ಯೋತ್ಸವವನ್ನೂ ಆಚರಣೆ ಮಾಡಬೇಕು. ಇಲ್ಲಿ ಯಾರನ್ನು ವೈಭವಿಕರಿಸಲಾಗುತ್ತಿಲ್ಲ ಎಂದ ಸುರೇಶ್ ಹೇಳಿದರು.

ಅರಮನೆ ಮೈದಾನದಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ದರಾಮೋತ್ಸವದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣಾ ವರ್ಷ ಆಗಿರುವುದರಿಂದ ಯಾವುದೇ ಸಮಸ್ಯೆ ಆಗದ ನಿಟ್ಟಿನಲ್ಲಿ, ಅದರಲ್ಲೂ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗದ ರೀತಿಯಲ್ಲಿ ಕಾರ್ಯಕ್ರಮ ನಡೆಯಬೇಕು ಎಂದು ಸಭೆಯಲ್ಲಿ ಸಲಹೆ ನೀಡಿದರು.

ಸ್ವಾತಂತ್ರ್ಯ ಭಾರತದ 75 ನೇ ಅಮೃತ ಮಹೋತ್ಸವ ಹಾಗೂ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಜೊತೆಯಾಗಿ ಬಿಂಬಿಸುತ್ತಾ ಕಾರ್ಯಕ್ರಮ ಮಾಡುವುದು ಸೂಕ್ತ ಎಂಬುದು ವೈಯಕ್ತಿಕವಾದ ಅಭಿಪ್ರಾಯವಾಗಿದೆ ಎಂದ ಅವರು, ನಮಗೆ ಇಷ್ಟ ಇದೆಯೋ ಇಲ್ಲವೋ ಕಾರ್ಯಕ್ರಮದ ಹೆಸರು ಸಿದ್ದರಾಮೋತ್ಸವ ಎಂದು ಈಗಾಗಲೇ ಪ್ರಚಾರ ಆಗುತ್ತಿದೆ. ಅದನ್ನು ನಿರಾಕರಿಸುವುದರಿಂದ ಯಾವುದೇ ಲಾಭ ಇಲ್ಲ. ಇದನ್ನು ಒಪ್ಪಿಕೊಂಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಇದರ ಒಳಗಡೆ ಸೇರಿಸಿಕೊಳ್ಳಬೇಕು ಎಂದರು.

RELATED ARTICLES
- Advertisment -
Google search engine

Most Popular

Recent Comments